ಮುರಗೋಡ ಪೊಲೀಸರ ಕಾರ್ಯಾಚರಣೆ : ಒಂದೇ ವಾರದಲ್ಲಿ ಅಪಹರಣ, ಹಣ ಸುಲಿಗೆ ಪ್ರಕರಣ ಪತ್ತೆ : 7 ಜನ ಖದೀಮರ ಬಂಧನ
ಬೆಳಗಾವಿ, ಡಿ, 9 : ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿ ಅವರಿಂದ ಸುಮಾರು ಒಂದು ಲಕ್ಷ ಹಣ ದೋಚಿ ಫರಾರಿಯಾಗಿ ಜೀವ ಬೆದರಿಕೆ ಹಾಕಿದ್ದ 7 ಜನ ಖದೀಮರನ್ನು ಒಂದೇ ವಾರದಲ್ಲಿ ಬಲೆಗೆ ಬಿಳಿಸುವಲ್ಲಿ ಜಿಲ್ಲೆಯ ಮುರಗೋಡ ಪೊಲೀಸರು ಯಶಸ್ವಿಯಾಗಿದ್ದು ಬಂಧಿತರಿಂದ ನಗದು ಹಣ, ಕಾರು ಸೇರಿ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬಂದೇನವಾಜ್ ಅತ್ತಾರ, ರಮೇಶ ಚಂದರಗಿ, ಬಾಳೇಶ ಹೊಂಡಪ್ಪನವರ, ಶ್ರೀಶೈಲ ಹೊಂಡಪ್ಪನವರ, ಮಲ್ಲಪ್ಪ ಕೋಮಾರ್, ಇಮರಾನ್ ಮುಲ್ಲಾ, ನಾಗಪ್ಪಾ ರಂಗಣ್ಣನವರ ಇವರು ಈ ಅಪಹರಣ, ಹ ಸುಲಿಗೆ ಪ್ರಕರಣ ದಲ್ಲಿ ಬಂಧಿತ ಆರೋಪಿತರಾಗಿದ್ದಾರೆ.
ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದ ಹಿಂದೆ ವ್ಯಾಪರಿಯೊಬ್ಬರನ್ನು ಅಪಹರಿಸಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಅಲ್ಲದೆ ಒಂದು ಲಕ್ಷ ನಗದು ಹಣವನ್ನು ಸುಲಿಗೆ ಮಾಡಿದ ಪ್ರಕರಣವನ್ನು ಪತ್ತೆ ಮಾಡಿರುವ ಮುಗೋಡ ಪೊಲೀಸರು ಈ ಪ್ರಕರಣಕ್ಕೆ 7 ಜನ ಸುಲಿಗೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 60 ಸಾವಿರ ರೂ. ನಗದು ಹಣ, ಒಂದು ಚಾಕು, 6 ಮೊಬೈಲ್ ಮತ್ತು 5 ಲಕ್ಷ ಕಿಮ್ಮತ್ತಿನ ಒಂದು ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ಈ ಅಪಹರಣ ಮತ್ತು ಹಣ ಸುಲಿಗೆ, ಜೀವ ಬೆದರಿಕೆ ಪ್ರಕರಣವನ್ನು ಬೇದಿಸಿದ ರಾಮದುರ್ಗ ಡಿ.ಎಸ್.ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಮುರಗೋಡ ಠಾಣೆಯ ಪಿ.ಐ ಮೌನೇಶ್ವರ ಮಾಲಿ ಪಾಟೀಲ, ಪ್ರೋ. ಪಿಎಸ್‌ಐ ಬಸಗೌಡ ನೇರ್ಲಿ, ಕುಮಾರಿ ಲಕ್ಷ್ಮೀ ಬಿರಾದಾರ ಹಾಗೂ ಸಿಬ್ಬಂದಿ ಜನರಾದ ಕೆ.ಬಿ ಅಲಗರಾವುತ, ಎಮ್.ಬಿ. ಸಣ್ಣನಾಯ್ಕ, ಎಚ್.ಆರ್ ನ್ಯಾಮಗೌಡ್ರ, ಎಮ್.ಎಸ್ ಅವರಾದಿ, ರಮೇಶ ಸಸಾಲಟ್ಟಿ, ವಿಠಲ ಮುರಗೋಡ ಮತ್ತು ಅಬ್ಬಾಸ ಗೋಕಾಕ ಇವರ ತಂಡದ ಕಾರ್ಯ ವೈಖರಿ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಮತ್ತು ಹೆಚ್ಚುವರಿ ಎಸ್.ಪಿ ಮಹಾನಿಂಗ ನಂದಗಾವಿ ಅವರು ಪ್ರಶಂಸಿಶಿದ್ದಾರೆ.