ಬೈಲಹೊಂಗಲದಲ್ಲಿ ಚಿತ್ರ ನಟ ಶಿವರಂಜನ ಮೇಲೆ ಪಿಸ್ತೂಲ್ ನಿಂದ 3 ಸುತ್ತು ಗುಂಡಿನ ದಾಳಿ : ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ದೌಡು

ಬೈಲಹೊಂಗಲದಲ್ಲಿ ಚಿತ್ರ ನಟ ಶಿವರಂಜನ ಮೇಲೆ ಪಿಸ್ತೂಲ್ ನಿಂದ 3 ಸುತ್ತು ಗುಂಡಿನ ದಾಳಿ : ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ದೌಡು

ಬೆಳಗಾವಿ, ಜು, 12 : ಚಲನಚಿತ್ರ ನಟ ಶಿವರಂಜನ ಬೋಳನವರ ಮೇಲೆ ಅಪರಿಚಿತರು ಪಿಸ್ತೂಲ್ ನಿಂದ ಮೂರು ಸುತ್ತು ಗುಂಡಿನ ದಾಳಿ ಮಾಡಿರುವ ಘಟನೆ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದಿದೆ. 

    ಹೌದು ಓದುಗರೆ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಬಳಿಯ ಹಳೆ ಹನುಮಂತನ ದೇವಸ್ಥಾನ ಬಳಿಯಲ್ಲಿ ಉದ್ಯಮಿ ಚಲನಚಿತ್ರ ನಟ ಶಿವರಂಜನ ಬೋಳ್ಳನವರ ಮೇಲೆ ಅನಾಮಧೇಯ ಇಬ್ಬರು ದ್ವಿಚಕ್ರ ವಾಹನ ಮೇಲೆ ಬಂದು ಪಿಸ್ತೂಲ್ ನಿಂದ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಶಿವರಂಜನ ಅವರಿಗೆ ಗಾಯಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಸ್ತೂಲ್ ದಾಳಿ ನಡೆಸಿರುವ ವ್ಯಕ್ತಿಗಳಿಗಾಗಿ ಬೈಲಹೊಂಗಲ ಡಿಎಸ್ ಪಿ, ಸಿಪಿಐ ಮತ್ತು ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ರಾತ್ರಿ 8 ಗಂಟೆಯ ಸುಮಾರಿಗೆ ಈ ಗುಂಡಿನ ದಾಳಿ ನಡೆಸಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ತಿಳಿಸಿದ್ದಾರೆ.

ಸುದ್ದಿ ಓದಿ