ಅಂತರರಾಷ್ಟ್ರೀಯ

ಕಡಿಮೆ ವೇತನ ..... ಪ್ರಧಾನಿ ಹುದ್ದೆಗೆ ರಾಜೀನಾಮೆ...!

ಕಡಿಮೆ ವೇತನ ..... ಪ್ರಧಾನಿ ಹುದ್ದೆಗೆ  ರಾಜೀನಾಮೆ...!

ಲಂಡನ್, ಅ  20: ಸಾಮಾನ್ಯವಾಗಿ ಯಾವುದೇ  ಸಂಸ್ಥೆಗಳಲ್ಲಿ  ಉದ್ಯೋಗದಲ್ಲಿರುವವರಿಗೆ  ತಾವು ಪಡೆದುಕೊಳ್ಳುತ್ತಿರುವ  ಸಂಭಳ    ತೃಪ್ತಿಯಾಗದಿದ್ದರೆ..  ಬೇರೆ ಕಂಪನಿಯಲ್ಲಿ  ಒಳ್ಳೆ  ಉದ್ಯೋಗ   ಆಫರ್   ಬಂದ   ಕೂಡಲೇ   ಮಾಡುತ್ತಿರುವ ಕೆಲಸಕ್ಕೆ  ಗುಡ್ ಬೈ ಹೇಳಿ, ಹೊಸ ಕಂಪನಿ  ಸೇರಿಕೊಳ್ಳುತ್ತಾರೆ.  ಹೀಗೆ ಉದ್ಯೋಗ  ತ್ಯಜಿಸುವುದು   ಸಾಮಾನ್ಯ ವಿಷಯ.   ಆದರೆ .. ಇಲ್ಲೊಬ್ಬ ಒಬ್ಬ ವ್ಯಕ್ತಿ ಮಾತ್ರ   ಉತ್ತಮ  ವೇತನದ  ಉದ್ಯೋಗಕ್ಕಾಗಿ ಪ್ರಧಾನ ಮಂತ್ರಿ  ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.   ಇದು ಅಚ್ಚರಿಯ  ವಿಷಯವೇನು ಅಲ್ಲ..  ಇದು  ನಿಜ...   ಬ್ರಿಟನ್    ಪ್ರಧಾನಿ   ಬೋರಿಸ್  ಜಾನ್ಸನ್  ತಮಗೆ  ಲಭಿಸುತ್ತಿರುವ  ವೇತನ ಸಾಕಾಗದ  ಕಾರಣ  ರಾಜೀನಾಮೆ ನೀಡಿದ್ದಾರೆ.

ಈ  ಕ್ರಮವಾಗಿ   ಮುಂದಿನ  ಆರು ತಿಂಗಳಲ್ಲಿ   ಬೋರಿಸ್ ಜಾನ್ಸನ್  ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ ಎಂದು  ತಿಳಿದುಬಂದಿದೆ.   ಬೋರಿಸ್ ಜಾನ್ಸನ್ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಅವರು ಪತ್ರಿಕೆಯೊಂದರಲ್ಲಿ  ಅಂಕಣಕಾರರಾಗಿ ಕೆಲಸ ಮಾಡುತ್ತಿದ್ದರು.  ಆ ಪತ್ರಿಕೆಯಲ್ಲಿ ಅವರಿಗೆ  2.75 ಲಕ್ಷ ಪೌಂಡ್  ವೇತನ ನೀಡುತ್ತಿದ್ದರು. ಇನ್ನೂ ಹೆಚ್ಚುವರಿ  ಹಣವೂ  ಅವರಿಗೆ  ಲಭಿಸುತ್ತಿತ್ತು. ಆದರೆ,  ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದ, ಬೋರಿಸ್ ಜಾನ್ಸನ್‌ಗೆ  ಕೇವಲ 1.5  ಲಕ್ಷ  ಪೌಂಡ್  ಮಾತ್ರ  ವೇತನವನ್ನಾಗಿ  ನೀಡಲಾಗುತ್ತಿದೆ.    ಈ  ಹಣದಿಂದ  ಬೋರಿಸ್ ಜಾನ್ಸನ್ ತಮ್ಮ  ಕುಟುಂಬ   ನಿಭಾಯಿಸುವುದು  "ಕಷ್ಟ" ಎಂದು ಹೇಳಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.


ಸುದ್ದಿ ಓದಿ