ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವಿಗೆ: ಬಿಜೆಪಿ ವಿಜಯೋತ್ಸವ.
ಮಹಾಲಿಂಗಪುರ 14: ಬಿಹಾರ್ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾದಿಸಿದ ಹಿನ್ನಲೆ, ನಗರದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿತು. ನಗರದ ಚನ್ನಮ್ಮ ವೃತ್ತದಲ್ಲಿ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ, ಘೋಷಣೆ ಕೂಗಿ ಸಂಭ್ರಮಿಸಿದರು. 'ನರೇಂದ್ರ ಮೋದಿ ನೀವು ಮುನ್ನುಗ್ಗಿ ನಾವು ನಿಮ್ಮೊಂದಿಗೆ ಇದ್ದೇವೆ', 'ದೇಶದ ನಾಯಕ ಹೇಗಿರಬೇಕು, ಪ್ರಧಾನಿ ನರೇಂದ್ರ ಮೋದಿಯಂತಿರಬೇಕು' ಎಂದು ಘೋಷಣೆ ಮೊಳಗಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಂತೇಶ ಹಿಟ್ಟಿನಮಠ, ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಸದಸ್ಯ ಶೇಖರ ಅಂಗಡಿ, ಪಕ್ಷದ ಮುಖಂಡರಾದ ಶಿವಾನಂದ ಅಂಗಡಿ, ಮಹೇಶ ಜಿಡ್ಡಿಮನಿ, ಮಲ್ಲು ದಲಾಲ, ವೀರೇಶ ಮುಂಡಗನೂರ, ಪುಂಡಲೀಕ ಗಡೇಕರ, ರವಿ ಗಿರಿಸಾಗರ, ಮಹೇಶ ಚಿಂಚಲಿ, ಸೇರಿದಂತೆ ನಗರದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.