ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ, ಮಿತ್ರ ಪಕ್ಷಗಳ ಜಯಭೇರಿ: ವಿಜಯೋತ್ಸವ

ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ, ಮಿತ್ರ ಪಕ್ಷಗಳ ಜಯಭೇರಿ: ವಿಜಯೋತ್ಸವ


ಕೊಲ್ಹಾರ 17: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆ ಪಟ್ಟಣದಲ್ಲಿರುವ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿ ಭಾರತೀಯ ಜನತಾ ಪಕ್ಷದ ಬಸವನ ಬಾಗೇವಾಡಿ ಮಂಡಲದ ವತಿಯಿಂದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. 

ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಮಾತನಾಡಿ, ವೋಟ್ ಚೋರಿ ಎಂದು ಹೇಳುತ್ತಿರುವ ರಾಹುಲ್ ಗಾಂಧಿ ಯವರಿಗೆ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಕಳೆದ 30 ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಬಾಳಾ ಠಾಕ್ರೆಯವರ ಶಿವಸೇನಾವು ಮುಂಬೈ ಮಹಾನಗರ ಪಾಲಿಕೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿತ್ತು. ಇಷ್ಟು ದಿನ ಬೇರೆಯಾಗಿದ್ದ ಉದ್ದವ್ ಠಾಕ್ರೆ ಹಾಗೂ ರಾಜ್ ಠಾಕ್ರೆಯವರು ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದ ಸ್ನೇಹವನ್ನು ಕಡೆದುಕೊಂಡು ಶತಾಯಗತಾಯ ಚುನಾವಣೆ ಗೆಲ್ಲಬೇಕೆಂದು ಹೋರಾಟ ಮಾಡಿದ್ದರು ಇಂದು ಅವರ ಕನಸು ಭಗ್ನವಾಗಿದೆ. ಎನ್‌ಸಿಪಿ ಅಲ್ಪ ಬಹುಮತ ಪಡೆದರೆ ಕಾಂಗ್ರೆಸ್ ಹೀನಾಯವಾಗಿ ಸೋತಿದೆ ಎಂದರು. 

ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶಕ್ಕಾಗಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು, ದೇಶ ರಕ್ಷಣೆಯನು ಕಂಡು ಬೃಹನ್ಮುಂಬೈ ಮುನ್ಸಿಪಲ್ ಕಾರ​‍್ೊರೇಷನ್ (ಬಿಎಂಸಿ) ಚುನಾವಣೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮಹಾರಾಷ್ಟ್ರದಲ್ಲಿ ಅಲ್ಲಿನ ಮತದಾರರು ಭಾರತೀಯ ಜನತಾ ಪಕ್ಷ-ಶಿವಸೇನಾ ಏಕನಾಥ ಸಿಂಧೆ ಬಣವು ಸುಮಾರು 26 ಮಹಾನಗರ ಪಾಲಿಕೆಯಲ್ಲಿ ಅಭೂತ ಪೂರ್ವ ಗೆಲವು ಸಾಧಿಸಲು ಕಾರಾಣಿಕರ್ತರಾಗಿದ್ದಾರೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು. 

ಬಿಜೆಪಿ ಮುಖಂಡರಾದ ಚಂದ್ರಶೇಖರಯ್ಯ ಗಣಕುಮಾರ, ರಾಜಶೇಖರ ಶೀಲವಂತ, ಚಂದ್ರಶೇಖರ ಬೆಳ್ಳುಬ್ಬಿ, ಈರಯ್ಯ ಮಠಪತಿ, ವಿರೂಪಾಕ್ಷಿ ಕೋಲಕಾರ, ಬಾಬು ಭಜಂತ್ರಿ, ಪಿ.ಕೆ. ಗಿರಗಾಂವಿ, ಇಸ್ಮಾಯಿಲ್ ತಹಸೀಲ್ದಾರ, ಪರಮಾನಂದ ಬರಗಿ, ಅನಿಲ ಬಾಟಿ, ಮಲ್ಲಪ್ಪ ಗಣಿ, ಶ್ರೀಶೈಲ ಕಂಬಿ, ರಾಮಣ್ಣ ಉಪ್ಪಲದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕಲರ್ ಬಾಕ್ಸ್‌ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಜಯಭೇರಿಯ ಹಿನ್ನೆಲೆ ಪಟ್ಟಣದಲ್ಲಿರುವ ದ್ಯಾಮವ್ವ ದೇವಿಗೆ ಪೂಜೆ ಸಲ್ಲಿಸಿ ಭಾರತೀಯ ಜನತಾ ಪಕ್ಷದ ಬಸವನ ಬಾಗೇವಾಡಿ ಮಂಡಲದ ವತಿಯಿಂದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. 


ಸುದ್ದಿ ಓದಿ