ದಾವಣಗೆರೆಯಲ್ಲಿ 48.17 ಮಿ.ಮೀ ಸರಾಸರಿ ಮಳೆ

ದಾವಣಗೆರೆಯಲ್ಲಿ 48.17 ಮಿ.ಮೀ ಸರಾಸರಿ ಮಳೆ

ದಾವಣಗೆರೆ ಜು. 23 ಜಿಲ್ಲೆಯಲ್ಲಿ ಗುರುವಾರ  48.17 ಮಿ.ಮೀ ಸರಾಸರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 43.70 ಲಕ್ಷ ರೂ.ಅಂದಾಜು ನಷ್ಟ ಸಂಭವಿಸಿದೆ.


ದಾವಣಗೆರೆ ತಾಲ್ಲೂಕಿನಲ್ಲಿ 38.45 ಎಂ.ಎಂ, ಚನ್ನಗಿರಿ ತಾಲ್ಲೂಕಿನಲ್ಲಿ 38.63 ಎಂ.ಎಂ, ಹರಿಹರ ತಾಲ್ಲೂಕಿನಲ್ಲಿ 57.80 ಎಂ.ಎಂ, ಹೊನ್ನಾಳಿ ತಾಲ್ಲೂಕಿನಲ್ಲಿ 88.10 ಎಂ.ಎಂ, ಜಗಳೂರು ತಾಲ್ಲೂಕಿನಲ್ಲಿ 17.88 ಸರಾಸರಿ ವಾಸ್ತವ ಮಳೆಯಾಗಿದೆ.


ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 25 ಕಚ್ಚಾ ಮನೆ ಪೂರ್ಣ ಹಾನಿಯಾಗಿದ್ದು, ಅಂದಾಜು 1.30 ಲಕ್ಷ ರೂ.  ನಷ್ಟ ಸಂಭವಿಸಿದೆ. ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿ 1 ಪಕ್ಕಾ ಮನೆ ಪೂರ್ಣ ಹಾನಿಯಾಗಿದ್ದು, ಒಟ್ಟು  5.65 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.

ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ 21 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು ಒಟ್ಟು 2.55ಲಕ್ಷ  ರೂ.ಅಂದಾಜು ನಷ್ಟ ಸಂಭವಿಸಿದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 19 ಪಕ್ಕಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು 8.90 ಲಕ್ಷ ರೂ. ನಷ್ಟ ಸಂಭವಿಸಿದೆ. ಜಗಳೂರು ತಾಲ್ಲೂಕು ವ್ಯಾಪ್ತಿಯಲ್ಲಿ 12 ಕಚ್ಚಾ ಮನೆ ಭಾಗಶಃ ಹಾನಿಯಾಗಿದ್ದು, ಅಂದಾಜು 13.50 ಲಕ್ಷ ರೂ ನಷ್ಟ ಸಂಭವಿಸಿದೆ.

ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ಓದಿ