ಎಲಬುರ್ಗ

ಕೆ.ಎಸ್.ಆರ್.ಟಿ.ಸಿ ಬಸ್ಸಿನ ಹಿಂಬದಿಗೆ ಆಟೋ ಡಿಕ್ಕಿ

ಕೆ.ಎಸ್.ಆರ್.ಟಿ.ಸಿ ಬಸ್ಸಿನ ಹಿಂಬದಿಗೆ ಆಟೋ ಡಿಕ್ಕಿ

ಯಲಬುರ್ಗಾ 27: ಯಲಬುಗರ್ಾದಿಂದ ಕುದ್ರಿಮೋತಿಗೆ ಪ್ರಯಾಣಿಸುತ್ತಿದ್ದ ಇಲ್ಲಿಯ ಕೆಎಸ್ಆರ್ಟಿಸಿ ಬಸ್ಸಿನ ಹಿಂಬದಿಗೆ ಆಟೋವೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕನಿಗೆ ಗಾಯವಾಗಿರುವ ಘಟನೆ ಪಟ್ಟಣದ ಮಂಜುನಾಥ ಶಿಕ್ಷಣ ಸಂಸ್ಥೆಯ ಮುಂದೆ ಗುರುವಾರ ಮಧ್ಯಾಹ್ನ ನಡೆದಿದೆ. ಸ್ಥಳಿಯ ಘಟಕದ ಸರ್ಕಾರೀ ಬಸ್ ಯಲಬುಗರ್ಾದಿಂದ ಕುದ್ರಿಮೋತಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆಟೋ ಮುಂದಿನ ಭಾಗ  ಜಖಂವಾಗಿದೆ. ಚಾಲಕ ಸಂತೋಷಕುಮಾರ ಕಿಳ್ಳಿಕ್ಯಾತರ ಅವರಿಗೆ ಗಾಯವಾಗಿದ್ದು, ಪಟ್ಟಣದ 100 ಹಾಸಿಗೆಯ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೊ ಚಾಲಕನ ನಿರ್ಲಕ್ಷದಿಂದ ಬಸ್ಸಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಡಿಪೋ ವ್ಯವಸ್ಥಾಪಕ ರಮೇಶ, ಪೋಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

 

ಸುದ್ದಿ ಓದಿ