ಸಂಕೇಶ್ವರ ಬಳಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ : ಮೂವರು ಬಂಧನ, ಕಾರು, ಬೈಕ್ ಸೇರಿ 1 ಕೆಜಿ 600 ಗ್ರಾಂ ಗಾಂಜಾ ವಶ

ಸಂಕೇಶ್ವರ ಬಳಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ : ಮೂವರು ಬಂಧನ, ಕಾರು, ಬೈಕ್ ಸೇರಿ 1 ಕೆಜಿ 600 ಗ್ರಾಂ ಗಾಂಜಾ ವಶ

ಬೆಳಗಾವಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಖದೀಮರನ್ನು ಬಂಧಿಸಿರುವ ಸಂಕೇಶ್ವರ ಪೊಲೀಸರು ಬಂಧಿತರಿಂದ ಸುಮಾರು 1 ಕೆ.ಜಿ 600 ಗ್ರಾಂ ಗಾಂಜಾ, ಒಂದು ಮಾರುತಿ ಸುಜಕಿ ಸ್ವಿಫ್ಟ್ ಕಾರು ಮತ್ತು ಒಂದು ದ್ವಿಚಕ್ರ ವಾಹನ ವಶಪಡಿಕೊಂಡಿರುವ  ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿ ಮಂಗಳವಾರ ತಡರಾತ್ರಿ ನಡೆದಿದೆ. 

  ತಾಜೀಬ್ ಅಬ್ದುಲ್ ರಜಾಕ್ ಮುಲ್ಲಾ (23, ಸಾ. ಘಟಪ್ರಭಾ), ತಾಜೀರ್ ಬಸ್ತವಾಡ(28, ಸಾ. ಕಣಗಲಾ, ತಾ. ಹುಕ್ಕೇರಿ), ಸೂಹೆಲ್ ಅಹಮ್ಮದ್ ನಜೀರಅಹಮ್ಮದ್  ಹುಬ್ಳಿಕರ್ (33, ಸಾ. ರಾಮನಗರ ಧಾರವಾಡ), ಮಂಜುನಾಥ್  ಚಿದಾನಂದ್  ಕಪ್ಲಿ(31, ಸಾ. ಧಾರವಾಡ) ಇವರು ಈ ಅಕ್ರಮ ಗಾಂಜಾ ಪ್ರಕರಣ ದಲ್ಲಿ ಬಂಧಿತ ಆರೋಪಿತರಾಗಿದ್ದಾರೆ.

     ಸಂಕೇಶ್ವರ್  ಪೊಲೀಸ್ ಠಾಣೆಯ  ವ್ಯಾಪ್ತಿಯ  ಕಣಗಲಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರಾಷ್ಟ್ರೀಯ ಹತ್ತಿರ ಸೋಮವಾರ ರಾತ್ರಿ ಗಾಂಜಾ ಮಾರಾಟ ಮಾಡಲು ಬಂದಿದ್ದ 4 ಜನ  ಆರೋಪಿತರಲ್ಲಿ  3 ಜನ  ಆರೋಪಿತರು ಸಿಕ್ಕಿಬಿದ್ದಿದ್ದು, ಅದರಲ್ಲಿನ ಓರ್ವ ಆರೋಪಿ ಪರಾರಿ  ಆಗಿದ್ದಾನೆ.

  ಪೊಲೀಸರಿಗೆ ಸೆರೆ ಸಿಕ್ಕಿರುವ 3 ಜನ ಆರೋಪಿತರ ಬಳಿ 1 ಕೆಜಿ 600 ಗ್ರಾಂ ಒಣಗಿದ ಗಾಂಜಾ ಹಾಗೂ 1 ಮಾರುತಿ ಶಿಫ್ಟ್ ಕಾರ್ ಮತ್ತು 1 ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಸುದ್ದಿ ಓದಿ