ಅಮೆರಿಕದ ಅಸ್ಟ್ರಾ ಲಾಂಚ್ ಕಂಪನಿಯ ರಾಕೆಟ್ 3.3 ಉಡಾವಣೆ ಪ್ರಯತ್ನ ಮತ್ತೆ ವಿಫಲ
ವಾಷಿಂಗ್ಟನ್, ಆ 29: ಅಸ್ಟ್ರಾ ರಾಕೆಟ್ 3.3 ಉಡಾವಣೆಯ ಮೂಲಕ ಕಕ್ಷೆಯನ್ನು ತಲುಪುವ ಅಮೆರಿಕದ ಪ್ರಯತ್ನ ಸತತ ಮೂರನೇ ಬಾರಿಗೆ ವಿಫಲವಾಗಿದೆ.
ಕ್ಯಾಲಿಫೋರ್ನಿಯಾ ಮೂಲದ ಅಸ್ಟ್ರಾ ಲಾಂಚ್ ಬಾಹ್ಯಾಕಾಶ ಕಂಪನಿ ರಾಕೆಟ್ 3.3 ಅನ್ನು ಹೊತ್ತ ವಾಹಕವನ್ನು ಶನಿವಾರ ರಾತ್ರಿ 10.35ಕ್ಕೆ (ಭಾರತೀಯ ಸಮಯ) ಕೊಡಿಯಾಕ್ ದ್ವೀಪದಲ್ಲಿನ ಪೆಸಿಫಿಕ್ ಸ್ಪೇಸ್‌ಪೋರ್ಟ್ ಕಾಂಪ್ಲೆಕ್ಸ್ - ಅಲಾಸ್ಕಾ (ಪಿಎಸ್‌ಸಿಎ) ನಿಂದ ಉಡಾಯಿಸಲಾಯಿತು.
ಆದರೆ, ರಾಕೆಟ್ ಮೇಲಕ್ಕೆ ಹೋಗುವ ಬದಲು, ಪಕ್ಕಕ್ಕೆ ಚಲಿಸಿತು ಮತ್ತು ಅಲ್ಪಾವಧಿಯ ಉಡಾವಣೆ ನಂತರ ಇಂಜಿನ್‌ಗಳು ಸ್ಥಗಿತಗೊಂಡು ಕೆಳಗೆ ಉರುಳಿತು ಎಂದು ಆಸ್ಟ್ರಾದ ನೇರ ಪ್ರಸಾರದ ಮೂಲಕ ತಿಳಿದುಬಂದಿದೆ.
ಈ ಉಡಾವಣೆಯು ಒಂದು ವರ್ಷದೊಳಗೆ ಕಕ್ಷೆಯನ್ನು ತಲುಪಲು ಕಂಪನಿಯ ಮೂರನೇ ಪ್ರಯತ್ನವಾಗಿದೆ. 2020ರ ಸೆಪ್ಟೆಂಬರ್ ರಲ್ಲಿ ರಾಕೆಟ್ 3.1 ಹಾಗೂ 2020ರ ಡಿಸೆಂಬರ್ ನಲ್ಲಿ ರಾಕೆಟ್ 3.2 ಉಡಾವಣೆಯ ಪ್ರಯತ್ನ ನೆಲಕಚ್ಚಿದ್ದವು.