ಮಹಲಿಂಗಪುರ

ಆಸಿಫ್ ತಾಸೆವಾಲೆ ರಾಷ್ಟಮಟ್ಟಕ್ಕೆ ಆಯ್ಕೆ

ಆಸಿಫ್ ತಾಸೆವಾಲೆ ರಾಷ್ಟಮಟ್ಟಕ್ಕೆ ಆಯ್ಕೆ


ಮಹಾಲಿಂಗಪುರ 26: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯ ವಿದ್ಯಾರ್ಥಿ ಆಸಿಫ್ ತಾಸೆವಾಲೆ ಸಬ್‌ಜ್ಯೂನಿಯರ್ ಕಬಡ್ಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ.  ಹರಿಯಾಣ ರಾಜ್ಯದ ಸೋನಿಪತ್ ನಲ್ಲಿ ನ.27ರಿಂದ 30ರವರೆಗೆ ನಡೆಯಲಿರುವ 35ನೇ ಸಬ್ ಜ್ಯೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾನೆ. ಬಾಲಕನಿಗೆ ದೈಹಿಕ ಶಿಕ್ಷಕ ವೈ.ಎಸ್‌.ಜಗದಾಳ ಮಾರ್ಗದರ್ಶನ ಮಾಡಿದ್ದರು ಎಂದು ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ತಿಳಿಸಿದ್ದಾರೆ. 


ಸುದ್ದಿ ಓದಿ