ಹೂವಿನ ಹಡಗಲಿ

ಇಂಧನ ಕೃತಕ ಅಭಾವ ; ಕೃಷಿ ಚಟುವಟಿಕೆ ಗೆ ಅಡ್ಡಿ

ಇಂಧನ ಕೃತಕ ಅಭಾವ ; ಕೃಷಿ ಚಟುವಟಿಕೆ ಗೆ ಅಡ್ಡಿ

ಲೋಕದರ್ಶನ ವರದಿ   

ಹೂವಿನಹಡಗಲಿ 22:   ಅಂತಾರಾಷ್ಟ್ರೀಯ ಮಟ್ಟದಲ್ಲಿ ಏರಿಳಿತಗಳ  ನಡುವೆ ಪಟ್ಟಣದಲ್ಲಿ  ಪೆಟ್ರೋಲ್ ಮತ್ತು ಡಿಸೇಲ್ ಕೃತಕ ಅಭಾವ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ದಿಂದ ಬಂಕ್ ಗಳಲ್ಲಿ ಡೀಸೆಲ್ಗೆ ಅಭಾವ ಸೃಷ್ಟಿಯಾಗಿದ್ದು, ರೈತರು ಸೇರಿ ವಾಹನಗಳ ಮಾಲೀಕರು ಡಿಸೇಲ್ ಗಾಗಿ ಸರತಿ ಸಾಲಿನಲ್ಲಿ ನಿಂತು  ಜಾಗರಣೆ ಮಾಡುವ ಪರಿಸ್ಥಿತಿ ಎದುರಾಗಿದೆ.ಈಗಾಗಲೇಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ನೇಗಿಲು, ರೋಟಾವೇಟರ್, ಬಿತ್ತನೆ ಸೇರಿ ಇತರ ಯಾಂತ್ರೀಕೃತ ಕೃಷಿ ಸಾಧನಗಳಿಗೆ ಡೀಸೆಲ್ ಮತ್ತು ಪೆಟ್ರೋಲ್ ಅಗತ್ಯವಾಗಿದೆ. ಸದ್ಯ ಇಂಧನದ ಅಭಾವ ಉಂಟಾಗಿರುವುದು .ಪರಿಣಾಮ ಬೀರುವ ಸಾಧ್ಯತೆಯಿದೆ. ಹಳ್ಳಿಗಳಲ್ಲಿ ಟ್ಯಾಕ್ಟರ್ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮಾಲೀಕರು ಹೆಚ್ಚುವರಿಯಾಗಿ ಕ್ಯಾನ್ ಗಳಲ್ಲಿ ಇಂಧನ ಸಂಗ್ರಹಿಸಿಟ್ಟು ಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬಂಕ್ಗಳ ಮುಂದೆ ಕ್ಯಾನ್ ಹಿಡಿದು ರಾತ್ರಿಯಿಡೀ ಸರದಿಯಲ್ಲಿ ನಿಂತು ಕಾಯುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. 


ಸುದ್ದಿ ಓದಿ