ಮಹಲಿಂಗಪುರ

ಕಲೆಗಾಗಿ ಜೀವನ ಹೊರತು ಕಲೆಯೇ ಜೀವನ ಅಲ್ಲ : ದರೇಪ್ಪ ಸಾಂಗ್ಲಿಕರ

ಕಲೆಗಾಗಿ ಜೀವನ ಹೊರತು ಕಲೆಯೇ ಜೀವನ ಅಲ್ಲ : ದರೇಪ್ಪ ಸಾಂಗ್ಲಿಕರ

ಕೌಜಲಗಿ ನಿಂಗಮ್ಮ ಭವನದಲ್ಲಿ ಸುವರ್ಣ ಕರ್ನಾಟಕ ಜಾನಪದ ಸಂಭ್ರಮ ಕಾರ್ಯಕ್ರಮ  

ಮಹಾಲಿಂಗಪುರ 27 : ಕಲೆ ಯಾರ ಸೊತ್ತು ಅಲ್ಲ ಅದು ಖರೀದಿ ವಸ್ತು ಅಲ್ಲ, ಕಲೆ ನಿಂತ ನಿರಲ್ಲ ಅದು ನಿರಂತರ ಹರಿಯುವ ನಿರಾಗಬೇಕು, ಕಲೆ ಉಳಿದರೆ ಕಲಾವಿದ ಉಳಿಯುತ್ತಾನೇ ಬೆಳೆಯುತ್ತಾನೆ, ಕಲೆಯನ್ನು ಉಳಿಸುವ ಬೆಳೆಸುವ ಕೆಲಸ ನಿರಂತವಾಗಿ ನಡೆಯಬೇಕು, ಅದಕ್ಕಾಗಿ ಮೇಲಿಂದ ಮೇಲೆ ಇಂತಹ ಸಮ್ಮೇಳನಗಳು ನಡೆಯಬೇಕು. ಆಗಲೇ ಅದಕ್ಕಾಗಿ ಸರ್ಕಾರ ಪ್ರೋತ್ಸಾಹ ನೀಡಬೇಕು, ಕಲೆಯನ್ನು ಪ್ರೀತಿಸುತ್ತಾರೋ ಅವರನ್ನು ಕಲೆ ಕೈ ಹಿಡಿದು ಪೋಷಿಸುತ್ತದೆ. ಕಲೆಗಾಗಿ ಜೀವನ ಹೊರತು ಕಲೆಯೇ ಜೀವನ ಅಲ್ಲ ಎಂದು ಜಿಲ್ಲಾ ಪಂಚಮಸಾಲಿ ಸಂಘದ ಅಧ್ಯಕ್ಷರಾದ ರನ್ನ ಬೆಳಗಲಿಯ ಧರೆಪ್ಪ ಸಾಂಗ್ಲಿಕರ  ಹೇಳಿದರು. 

ಸ್ಥಳೀಯ ಹಿರಿಯ ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ತಾಲೂಕಾ ಘಟಕ ರಬಕವಿ ಬನಹಟ್ಟಿ ಹಾಗೂ ವಲಯ ಘಟಕ ಮಹಾಲಿಂಗಪುರ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ ಇವರ ಸಹಯೋಗದಲ್ಲಿ ನಡೆದ ಸುವರ್ಣ ಕರ್ನಾಟಕ ಜಾನಪದ ಸಂಭ್ರಮ ಹಾಗೂ ಸಾಧಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ  ಮುಖ್ಯ ಅಥಿತಿಗಳಾಗಿ ಭಾಗವಹಿಸಿ  ಮಾತನಾಡಿ ಅವರು ನಗರದಲ್ಲಿ ಎಷ್ಟೋ ಕಲಾವಿದರು ಇದ್ದು ಬೆರಳನಕ್ಕೆಷ್ಟು ಜನ ಕಲಾವಿದರು ಭಾಗವಹಿಸಿದು ದುಃಖ ತರಿಸಿದೆ, ಇಂತಹ ಸಮ್ಮೇಳನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಇದು ಕಲಾವಿದರು ಸಮ್ಮೇಳನ ಅದಕ್ಕಾಗಿ ಮುಂದಿನ ದಿನಮಾನದಲ್ಲಿ ಕಲಾವಿದರು ತಮ್ಮನ್ನು ತಾವು ಅರಿತುಕೊಂಡು ಭಾಗವಹಿಸಬೇಕು ಎಂದು ಹೇಳಿದರು. 

ನಂತರ ಮಾತನಾಡಿದ ಪುರಸಭೆ ಅಧಿಕಾರಿಗಳಾದ ಸಿ ಎಸ್ ಮಠಪತಿ, ನಗರದಲ್ಲಿ ಕೌಜಲಗಿ ನಿಂಗಮ್ಮ ಭವನವನ್ನು ಕಲಾವಿದರು ಗೋಸ್ಕರ ಸರ್ಕಾರ ಸುಮಾರು 4.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದು, ಇದರ ಸದುಪಯೋಗ ಆಗಬೇಕು ನಿರಂತರ ಕಲಾ ಚಟುವಟಿಕೆಗಳು ನಡೆಯುತ್ತಿರಬೇಕು. ಅದನ್ನು ಕಲಾವಿದರು ಬಳಸಿಕೊಳ್ಳಬೇಕು ಇಂತಹ ಭವನ ನಿರ್ಮಾಣವಾಗಿದ್ದು ನಮ್ಮೆಲ್ಲರ ಹೆಮ್ಮೆ ನಿರಂತರ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಬೇಕು, ಆಗಲೇ ಇದನ್ನು ನಿರ್ಮಿಸಿದ್ದಕ್ಕೂ ಸ್ವಾರ್ಥಕವಾಗುತ್ತದೆ. ಎಂದು ಹೇಳಿದರು. 

ಸಾಧಕ ರತ್ನ ಪ್ರಶಸ್ತಿ ಪ್ರಧಾನ :  ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾಯಕ ಮಾಡುತ್ತಾ ಎಲೆ ಮರೆ ಕಾಯಿಯಂತೆ ಕೆಲಸ ಮಾಡುತ್ತ ಸಮಾಜ ಸೇವೆಯನ್ನು ಪರಿಪಕ್ವತೆಯಿಂದ ಮಾಡಿ ಎಲ್ಲ ಸಮಾಜದ ಪ್ರೀತಿಗೆ ಪಾತ್ರರಾದ 24 ಸಾಧಕರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು , 

ಈ ಸಂಧರ್ಭದಲ್ಲಿ ಮಹಾದೇವ ಕದ್ದಿಮನಿ ಪ್ರಶಸ್ತಿ ಪುರಸ್ಕೃತರ ಪರವಾಗಿ ರವಿ ಜಮಖಂಡಿ ಮಾತನಾಡಿದರು ಜಯರಾಮ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು, ಶಿವಲಿಂಗ ಟಿರ್ಕಿ, ಅಣ್ಣಾಜಿ ಫಡತಾರೆ, ಬಸವರಾಜ ರಾಯರ,ಮೀರಾ ತಟಗಾರ, ನಿಜಾಮ ಅಲ್ಲಾಖಾನ, ಮಲ್ಲಪ್ಪಾ ಮುದಕಪ್ಪಾಗೋಳ, ಮೆಹಬೂಬ ಸನದಿ, ಸಂಗಪ್ಪ ಹಲ್ಲಿ, ಜಿ ಎಸ್ ಗೊಂಬಿ,ಬಸವರಾಜ ಮೇಟಿ, ರಮೇಶ ಸಬಕಾಳೆ, ಚಿದಾನಂದ ಸೊಲ್ಲಾಪುರ, ಶ್ರೀಶೈಲ ಭೂಯ್ಯಾರ, ಮಹೇಶ ಆರಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಪ್ಪ ಚಿಂಚಲಿ, ಭೀಮಪ್ಪ ಗಜಾಗೋಳ, ಗುರ​‍್ಪ ಪಂಕಿ, ರಾಜು ಗೆದ್ದೇಪ್ಪನವರ , ಡಾ ಗಂಗಾಧರ ಮಗದುಮ್, ಶಂಕರ ನೀಲಾರಿ, ಭೀಮಶಿ ನೇಗಿನಾಳ, ಸಿ ಅಯ್ ಕೊಳಕಿ, ಬಸವರಾಜ ಪರೀಟ, ವಿನೋದ ಸಿಂಪಿ, ರಾಜು ಗಲಗಲಿ, ಪಂಡಿತ ಬಡಿಗೇರ,ಚನ್ನಪ್ಪ ಹುನ್ನೂರ, ಹಣಮಂತ ಮೇರಾಪಟ್ಟಿ, ಮೈತ್ರಾದೇವಿ ಕದ್ದಿಮನಿ, ರಾಜೇಶ್ವರಿ ಉಮದಿ,ಶ್ರೀಮತಿ ಸುಹಾಸಿನಿ ಕದ್ದಿಮನಿ, ಸೀಮಾ ಹಲ್ಲಿ ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು, ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ