ಬಿಆರ್ ಟಿ ಹುಲಿ ರಕ್ಷಿತಾರಣ್ಯದಲ್ಲಿ ಐವರು ಕಳ್ಳ ಬೇಟೆಗಾರರ ಬಂಧನ
ಚಾಮರಾಜ ನಗರ, ಜುಲೈ 29 ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಬಂಧಿಸಿ, ಬೇಟೆಗೆ ಬಳಿಸಿದ್ದ ಬಂದೂಕು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಗೋವಿಂದರಾಜು (29) ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಪ್ರಮೋದ್ (27) ಎಂದು ಗುರುತಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದವರಾಗಿದ್ದರೆ, ಒಬ್ಬರು ಚಾಮರಾಜನಗರ ತಾಲ್ಲೂಕಿನ ಬಡಗಲಪುರ ಮತ್ತು ಇಬ್ಬರು ಬೆಂಗಳೂರಿನ ಮಲ್ಲೇಶ್ವರಂ ಮೂಲದವರಾಗಿದ್ದಾರೆ.
ಎರಡು ಬಂದೂಕುಗಳು(ಈ ಪೈಕಿ ಒಂದಕ್ಕೆ ಪರವಾನಿಗೆ ಇಲ್ಲ), ಆರು ಜೀವಂತ ಕಾರ್ಟಿಜ್ ಗಳು, ಒಂದು ಚಾಕು, ಬ್ಯಾಟರಿ ದೀಪಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಸ್ತು ತಿರುಗುತ್ತಿದ್ದ ಇಲಾಖೆ ಸಿಬ್ಬಂದಿ, ವಡ್ಗಲಪುರ ಬಳಿಯ ಚಾಮರಾಜನಗರಕ್ಕೆ ತೆರಳುತ್ತಿದ್ದ ಕಾರನ್ನು ತಡೆದು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅರಣ್ಯ ಉಪ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.