ಕಾಶ್ಮೀರದಲ್ಲಿ ಸೇನಾ ಹೆಲಿಕಾಪ್ಟರ್ ಪತನ

ಕಾಶ್ಮೀರದಲ್ಲಿ ಸೇನಾ  ಹೆಲಿಕಾಪ್ಟರ್  ಪತನ

ಶ್ರೀನಗರ್ ಆ 3  ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಸೇನಾ  ಹೆಲಿಕಾಪ್ಟರ್  ಪತನಗೊಂಡಿದೆ ಎಂದು ರಕ್ಷಣಾ ಮೂಲಗಳು ಹೇಳಿವೆ .

ರಕ್ಷಣಾ ಕಾರ್ಯಾಚರಣೆಗಾಗಿ ಎನ್ಡಿಆರ್ಎಫ್ ತಂಡ ನಿಯೋಜಿಸಲಾಗಿದೆ. ಹೆಲಿಕಾಪ್ಟರ್ ರಂಜಿತ್ ಸಾಗರ್ ಅಣೆಕಟ್ಟು ಜಾಗದಲ್ಲಿ   ಹಾರಾಟದಲ್ಲಿ ನಿತರವಾಗಿದ್ದಾಗ  ಅಪಘಾತಕ್ಕೀಡಾಯಿತು ಎಂದು ಹೇಳಲಾಗಿದೆ.
ರಕ್ಷಣಾ ತಂಡಗಳನ್ನು ಸ್ಥಳಕ್ಕೆ ನಿಯೋಜನೆ ಮಾಡಿದ್ದು ನುರಿತ  ಈಜುಗಾರರನ್ನು ಸಹ ಸ್ಥಳಕ್ಕೆ  ಕರೆಸಲಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ. ಕಳದೆ  ಜನವರಿಯಲ್ಲಿ ಸೇನಾ  ಹೆಲಿಕಾಪ್ಟರ್ ಕಥುವಾ ಜಿಲ್ಲೆಯ ಲಖನ್ಪುರದಲ್ಲಿ ಅಪಘಾತಕ್ಕೀಡಾಗಿ ಒಬ್ಬ ಪೈಲಟ್ ಮೃತಪಟ್ಟಿದ್ದರು.

ಸುದ್ದಿ ಓದಿ