ಆರ್ಚರಿ: ಕ್ವಾರ್ಟರ್ ಫೈನಲ್‌ನಲ್ಲಿ ಭಾರತಕ್ಕೆ ನಿರಾಸೆ
ಟೋಕಿಯೊ, ಜು.26 - ಭಾರತದ ಬಿಲ್ಲುಗಾರರು, ಒಲಂಪಿಕ್ ಕ್ರೀಡಾಕೂಟದ ನಾಲ್ಕನೇ ದಿನ ಕಳಪೆ ಪ್ರದರ್ಶನ ನೀಡಿದ್ದಾರೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಬಿಲ್ಲುಗಾರರಾದ ಅತನು ದಾಸ್, ಪ್ರವೀಣ್ ಜಾಧವ್ ಮತ್ತು ತರುಣ್ ದೀಪ್ ರೈ ತಂಡ ಸೋಲಿನ ಕಹಿ ಅನುಭವಿಸಿ ಪಂದ್ಯಾವಳಿಂದ ಹೊರಬಿದ್ದಿದೆ.
ಎಂಟರ ಹಂತದ ಸ್ಪರ್ಧೆಯಲ್ಲಿ ಭಾರತ 0-6 ರಿಂದ ದಕ್ಷಿಣ ಕೊರಿಯಾ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿ ಸ್ಪರ್ಧೆಂದ ಹೊರಬಿದ್ದಿತು.
ಇದಕ್ಕೂ ಮುನ್ನ ಆಡಿದ ಹದಿನಾರರ ಹಂತದ ಸ್ಪರ್ಧೆಗಳಲ್ಲಿ ಕಜಕಿಸ್ತಾನ ತಂಡವನ್ನು 4-2 ರಿಂದ ಪರಾಜಯಗೊಳಿಸಿ ಎಂಟರ ಹಂತ ಕಂಡಿದ್ದ ಭಾರತ ತಂಡ, ಕನಿಷ್ಠ ಕಂಚಿನ ಪದಕವನ್ನಾದರೂ ಬಾಚಿಕೊಂಡಿತ್ತೆಂಬ ನಿರೀಕ್ಷೆ ಇತ್ತು. ಆದರೆ ಅದು ನುಚ್ಚು ನೂರಾಗಿದೆ.