ಆರ್ಚರಿ: ಜಿದ್ದು ಗೆದ್ದ ಆತನು ಪ್ರೀ ಕ್ವಾರ್ಟರ್ ಗೆ

ಆರ್ಚರಿ: ಜಿದ್ದು ಗೆದ್ದ ಆತನು ಪ್ರೀ ಕ್ವಾರ್ಟರ್ ಗೆ

ಟೋಕಿಯೊ, ಜು.29 - ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ ಆತನು ದಾಸ್ ದಕ್ಷಿಣ ಕೋರಿಯಾ ಆಟಗಾರನನ್ನು ಮಣಿಸಿ 16 ನೇ ಸುತ್ತಿಗೆ ಪ್ರವೇಶಿಸಿದರು.
 
ಗುರುವಾರ ನಡೆದ ಪಂದ್ಯದಲ್ಲಿ ಆತನು 6-5 ರಿಂದ ದಕ್ಷಿಣ ಕೊರಿಯಾದ ಒಲಿಂಪಿಕ್ ಚಾಂಪಿಯನ್ ಓಹ್ ಜಿನ್-ಹೈಕ್ ಅವರನ್ನು ಸೋಲಿಸಿದರು. ಆರಂಭದಿಂದಲೂ ಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಆತನು ಕೊನೆಯಲ್ಲಿ 10 ಅಂಕ ಕಲೆ ಹಾಕಿದರು.
 
ದಕ್ಷಿಣ ಕೋರಿಯಾ ಆಟಗಾರ 26-25 ರಿಂದ ಮೊದಲ ಗೇಮ್ ಗೆದ್ದರೆ, ಎರಡನೇ, ಮೂರನೇ ಗೇಮ್ 27-27 ರಿಂದ ಡ್ರಾ ಆಯಿತು. ನಾಲ್ಕನೇ ಗೇಮ್ ನಲ್ಲಿ ಆತನು 8, 9, 10 ಅಂಕ ಕಲೆ ಹಾಕಿದರೆ, ಎದುರಾಳಿ ಆಟಗಾರ 9, 7, 6 ಅಂಕ ತಮ್ಮದಾಗಿಸಿಕೊಂಡರು. ಐದನೇ ಸುತ್ತಿನಲ್ಲಿ ಉಭಯ ಆಟಗಾರರು 28-28 ಅಂಕ ಕಲೆ ಹಾಕಿದ್ದರಿಂದ, ವಿಜೇತರನ್ನು ತಿಳಿದುಕೊಳ್ಳಲು ಮತ್ತೊಮ್ಮೆ ಗುರಿ ಈಡಲಾಯಿತು.
 
ಇದಕ್ಕೂ ಮೊದಲು ಅವರು 64 ನೇ ಸುತ್ತಿನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಚೀನಾದ ತೈಪೆಯ ಯು-ಚೆಂಗ್ ಡೆಂಗ್ ಅವರನ್ನು 6-4ರಿಂದ ಸೋಲಿಸಿದ್ದರು.
 
ಟೋಕಿಯೊ 2020 ರಲ್ಲಿ ಈಗ ಅತುನು ದಾಸ್ ಮತ್ತು ಅವರ ಪತ್ನಿ ದೀಪಿಕಾ ಕುಮಾರಿ ಪದಕದ ಆಸೆ ಚಿಗುರಿಸಿದ್ದಾರೆ.'

ಸುದ್ದಿ ಓದಿ