ಅಂತರರಾಷ್ಟ್ರೀಯ

ನಾಲ್ಕು ವರ್ಷದಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸಲು ಅರಬ್ ಎಮಿರೇಟ್ಸ್ ಸಿದ್ಧತೆ

ನಾಲ್ಕು ವರ್ಷದಲ್ಲಿ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆ ಇಳಿಸಲು ಅರಬ್ ಎಮಿರೇಟ್ಸ್ ಸಿದ್ಧತೆ

ದುಬೈ, ಸೆಪ್ಟೆಂಬರ್ 30: (ಕ್ಸಿನ್ಹುವಾ) ಸಂಯುಕ್ತ ಅರಬ್ ರಾಷ್ಟ್ರ(ಯುಎಇ) ಚಂದ್ರನನ್ನು ಅನ್ವೇಷಿಸಲು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, 2024 ರಲ್ಲಿ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಇಳಿಸಲು ಯೋಜಿಸಿದೆ ಎಂದು ಪ್ರಧಾನಿ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಬುಧವಾರ ಹೇಳಿದ್ದಾರೆ.

ಈ ವಿಮಾನವನ್ನು ಯುಎಇಯ ಎಮಿರಾಟಿ ಎಂಜಿನಿಯರ್‌ಗಳು ಸಂಪೂರ್ಣವಾಗಿ ತಯಾರಿಸಲಿದ್ದಾರೆ ಎಂದು ಅಲ್ ಮಕ್ತೌಮ್ ತಿಳಿಸಿದ್ದಾರೆ.

"ಇದುವರೆಗೆ ಅನ್ವೇಷಿಸದ ಚಂದ್ರನ ಕಾಣದ ಮತ್ತೊಂದು ಭಾಗದ ಮತ್ತೊಂದು ಭಾಗದ ಚಿತ್ರಗಳನ್ನು, ಅಂಕಿಅಂಶಗಳನ್ನು ಬಾಹ್ಯಾಕಾಶ ನೌಕೆ ಕಳುಹಿಸಲಿದೆ” ಎಂದು ಟ್ವೀಟ್ ಮಾಡಿದ್ದಾರೆ. 

ಚಂದ್ರನ ರೋವರ್ ಅನ್ನು ಯುಎಇ ಸಂಸ್ಥಾಪಕರಲ್ಲಿ ಒಬ್ಬರಾದ "ರಶೀದ್" ಹೆಸರಿನಿಂದ ಎಂದು ಕರೆಯಲಾಗುವುದು ಎಂದು ಎಮಿರೇಟ್ಸ್ ಸುದ್ದಿಸಂಸ್ಥೆ ತಿಳಿಸಿದೆ. 

ಅಂಕಿಅಂಶಗಳನ್ನು ಜಾಗತಿಕವಾಗಿ ಸಂಶೋಧನಾ ಕೇಂದ್ರಗಳು ಮತ್ತು ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಪ್ರಧಾನಿ ಹೇಳಿದ್ದಾರೆ.

ಈ ಯೋಜನೆ 2024 ರಲ್ಲಿ ಯಶಸ್ವಿಯಾದರೆ, ಯುನೈಟೆಡ್ ಸ್ಟೇಟ್ಸ್, ಸೋವಿಯತ್ ಯೂನಿಯನ್ ಮತ್ತು ಚೀನಾ ನಂತರ ಯುಎಇ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಭೂಮಿಯ ನಾಲ್ಕನೇ ರಾಷ್ಟ್ರವಾಗಲಿದೆ.

ಸುದ್ದಿ ಓದಿ