ಬೇಡಿಕೆಗಳಿಗೆ ಆಗ್ರಹಿಸಿ ಶಾಸಕರಿಗೆ ಮನವಿ

ಬೇಡಿಕೆಗಳಿಗೆ ಆಗ್ರಹಿಸಿ ಶಾಸಕರಿಗೆ ಮನವಿ

ಬೈಲಹೊಂಗಲ 10:  ರಾಜ್ಯ ಸಕರ್ಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 3500 ಕ್ಕಿಂತ ಹೆಚ್ಚು ಫಾರ್ಮಸಿಸ್ಟ್ರ ವೇತನ, ಭತ್ಯೆಗಳ  ಹಾಗೂ ವೃಂದ ಮತ್ತು ನೇಮಕಾತಿ ಬದಲಾವಣೆ ಮಾಡಲು ಆಗ್ರಹಿಸಿ ಶಾಸಕ ಮಹಾಂತೇಶ ದೊಡಗೌಡರ ಅವರಿಗೆ ಮನವಿ ಸಲ್ಲಿಸಲಾಯಿತು.

ಶುಕ್ರವಾರ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ವಾಲಿ ಮಾತನಾಡಿ, ಸಕರ್ಾರಕ್ಕೆ ಹಾಗೂ ಇಲಾಖೆಗಳಿಗೆ ಹಲವಾರು ಮನವಿಗಳನ್ನು ಸಲ್ಲಿಸಿದರೂ ಇದುವರಿಗೊ ಕ್ರಮ ಜರುಗಿಸಿಲ್ಲ. ಬೇಡಿಕೆಗಳಾದ ಅಖಿಲ ಭಾರತೀಯ ತಾಂತ್ರಿಕ ಪರಿಷತ್ತು ಕಾಯ್ದೆ 1987 ರಂತೆ ಫಾರ್ಮಸಿಯನ್ನು ಇಂಜಿನಿಯರಿಂಗ್ ಕೋಸರ್್ಗಳಂತೆ ತಾಂತ್ರಿಕ ವಿದ್ಯಾರ್ಹತೆ ಎಂದು ಪರಿಗಣಿಸಿ ವೇತನ ಭತ್ಯೆಗಳನ್ನು ನೀಡುವುದು. 

ಕೇಂದ್ರ ಹಾಗೂ ನೆರೆ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಸಿಸ್ಟ್ಗಳಿಗಿಂತ ಕಡಿಮೆ ವೇತನ ಹಾಗೂ ಭತ್ಯೆಗಳನ್ನು  ಪಡೆಯುತ್ತಲಿದ್ದು ಈ ಅನ್ಯಾಯವನ್ನು ಸರಿಪಡಿಸಲು ಇದುವರೆಗೆ ಇಲಾಖೆಯಿಂದ ಸಾಧ್ಯವಾಗಿಲ್ಲ. ನೆರೆ ರಾಜ್ಯ ಹಾಗೂ ಕೇಂದ್ರ ಸರಕಾರದ ಫಾರ್ಮಸಿಸ್ಟರು ಪಡೆಯುತಿರುವ ಆ ಸೌಲಭ್ಯವನ್ನು ನಮಗೆ ವಿಸ್ತರಿಸುವುದು. 1965 ರಂದು ಹೊರಡಿಸಿರುವ ವೃಂದ ಮತ್ತು ನೇಮಕಾತಿಯನ್ನು ಮುಂದುವರೆಸಿರುವುದರಿಂದ ಫಾರ್ಮಸಿಸ್ಟರಿಗೆ ಬಡ್ತಿ ಅವಕಾಶಗಳಲ್ಲಿ ಸಾಕಷ್ಟು ತೊಂದರೆಯಾಗುತ್ತಿದ್ದು, ಈಗಿರುವ ವಿದ್ಯಾರ್ಹತೆಗನುಗುಣವಾಗಿ ವೃಂದ ಮತ್ತು ನೇಮಕಾತಿ ಬದಲಾಯಿಸಿ ಬಡ್ತಿ ಅವಕಾಶಗಳನ್ನು  ಹೆಚ್ಚಿಸುವುದು.  ಹಾಗೊ ನೆರೆ ರಾಷ್ಟ್ರದಲ್ಲಿರುವಂತೆ ಫಾರ್ಮಸಿಸ್ಟ್ ಹುದ್ದೆಯ ಪದನಾಮವನ್ನು, ಫಾರ್ಮಸಿ ಅಧಿಕಾರಿ ಎಂದು ಬದಲಾವಣೆ ಮಾಡುವುದು ಇವುಗಳನ್ನೊಳಗೊಂಡು ಇನ್ನು ಅನೇಕ ಬೇಡಿಕೆಗಳನ್ನು ಇಡೆರಿಸಲು ಮನವಿ ಮಾಡಿದರು.

ಶಾಸಕ ಮಹಾಂತೇಶ ದೊಡಗೌಡರ ಮನವಿಗೆ ಸ್ಪಂದಿಸಿ ಆರೊಗ್ಯ ಇಲಾಖೆ ಸಚಿವರ ಮತ್ತು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವದು ಎಂದರು. ಅಶೊಕ ಮೊಖಾಸಿ, ನಿರ್ಮಲಾ ಕುರಕುರಿ, ವಿರೇಶ ಕುಬಸದ, ನಾಗರಾಜ ರಾಜನಾಳ, ಮಹೇಶ ಅಕ್ಕಸಾಲಿಗ, ಮಾಹಾದೇವ ಕುಂದರಗಿ, ರಾಜಕುಮಾರ ಕೋಲಕಾರ, ಮಂಜುನಾಥ ದೇವಲಾಪೂರ, ವೈಶಾಲಿ ಮುತ್ತೂರ, ಮಂಜುಳಾ ವಾಳಕೆ, ಮೀನಾಕ್ಷಿ ಮುದೋಳ, ಸುಕನ್ಯಾ ಶಿಂತ್ರೆ ಇದ್ದರು. ನಂತರ ತಹಶೀಲ್ದಾರ ಡಾ ಡಿ.ಎಚ್. ಹೂಗಾರ ಅವರ ಮೂಲಕ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಯಿತು 

ಸುದ್ದಿ ಓದಿ