ಸಾಮಾಜಿಕ ನ್ಯಾಯದಡಿ ಬಿಜೆಪಿ ಟಿಕೇಟ್ ನೀಡಲು ಮನವಿ
ನಾನು ತೇರದಾಳ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿ : ಮನೋಹರ ಶಿರೋಳ
ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಮತಕ್ಷದಲ್ಲಿ ಭಾರತೀಯ ಜನತಾ ಪಕ್ಷದ ನಿಷ್ಠರಾಗಿರುವ ನೇಕಾರ ಸಮುದಾಯಕ್ಕೆ ಇಲ್ಲಿಯವರೆಗೆ ಸ್ಥಳೀಯ ನೇಕಾರ ಸಮುದಾಯಕ್ಕೆ ಸಾಮಾಜಿಕ ನ್ಯಾಯದಡಿ ರಾಜಕೀಯ ಸೂಕ್ತಸ್ಥಾನ ಮಾನ ದೊರೆತ್ತಿಲ್ಲ. ನೇಕಾರ ಪರ ನೇಕಾರರ ಸಮುದಾಯದ ಸ್ಥಳೀಯ ಜನಪ್ರತಿನಿಧಿಯೊಬ್ಬರು ವಿಧಾನಸಭೆಯ ಮೆಟ್ಟಲ್ಲೇರಿಲ್ಲ. ಅದಕ್ಕಾಗಿ ಬಿಜೆಪಿಯ ಜಯದಲ್ಲಿ ಅಗ್ರಸ್ಥಾನದಲ್ಲಿರುವ ನೇಕಾರ ಸಮುದಾಯ ನಾನು ತೇರದಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದೇನೆಂದು ರಾಜ್ಯ ನೇಕಾರ ಪ್ರಕೋಷ್ಟದ ಬಿಜೆಪಿಯ ಮಾಜಿ ಸಂಚಾಲಕ ಹಾಗೂ ಬಿಜೆಪಿಯ ಹಿರಿಯ ಮನೋಹರ ಶಿರೋಳ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮನೋಹರ ಶಿರೋಳ, ಮುಗ್ದರು ಹಾಗೂ ಅನೇಕ ಸೌಲಭ್ಯಗಳಿಂದ ವಂಚಿತರಾದ ನೇಕಾರ ಸಮುದಾಯ ತೇರದಾಳ ವಿಧಾನಸಭೆ ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ವರಿಷ್ಠರು ಇದನ್ನು ಗಮನದಲ್ಲಿಟ್ಟುಕೊಂಡು ನೇಕಾರ ಕ್ಷೇತ್ರವೆಂದೆ ಕರೆಯಿಸಿಕ್ಕೊಳ್ಳುವ ತೇರದಾಳ ಮತಕ್ಷೇತ್ರಕ್ಕೆ ನೇಕಾರ ಸಮುದಾಯದ ವ್ಯಕ್ತಿಗೆ 2023ರ ವಿಧಾನಸಭಾ ಚುನಾವಣೆಗೆ ಭಾಜಪ ಪಕ್ಷದಿಂದ ಅಭ್ಯರ್ಥಿ ಘೋಷಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದರು.
ಈ ಹಿಂದೆ ನಾಲ್ಕು ಬಾರಿ ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಾಗಿದ್ದೆ. ಇಲ್ಲಿಯವರೆಗೂ ಅವಕಾಶ ದೊರಕಿಲ್ಲ ಈಗಲಾದರೂ ಜಿಲ್ಲೆಯ 7 ವಿಧಾನ ಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ನೇಕಾರರೇ ನಿರ್ಣಾಯಕರು, ನನ್ನ ಪ್ರಾಮಾಣಿಕ ಶ್ರಮ ಗುರುತಿಸಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಅವಕಾಶ ಕಲ್ಪಿಸಿಕೊಡಬೇಕು ಇದು ನನ್ನ ಸಮುದಾಯದ ಬೇಡಿಕೆಯೂ ಆಗಿದೆ ಹಾಗಂತ ನಾನು ಪಕ್ಷ ವಿರೋಧಿಯಲ್ಲ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದರು.
ನೇಕಾರ ಕುಟುಂಬದಿಂದ ಬಂದಿರುವ ಭಾಜಪ ಪಕ್ಷದ ಏಳಿಗೆಗಾಗಿ ಮೂರು ದಶಕಗಳಿಗಿಂತ ಅವಿರತವಾಗಿ ಶ್ರಮಿಸುತ್ತಿದ್ದೇನೆ, 2006 ರಿಂದ 09 ರವರೆಗೆ ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿ, 2010 ರಿಂದ 13 ರವರೆಗೆ ಜಿಲ್ಲಾ ನೇಕಾರ ಮೋರ್ಚಾ ಅಧ್ಯಕ್ಷ, 2014 ರಿಂದ 19ರ ವರೆಗೆ ಎರಡು ಬಾರಿ ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕನಾಗಿ ರಾಜ್ಯಾದ್ಯಂತ ಸಂಚರಿಸಿ ನೇಕಾರರ ಮತಗಳನ್ನು ಬಿಜೆಪಿ ಪಕ್ಷಕ್ಕೆ ದೊರಕಿಸಿಕೊಡುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದೇನೆ. ತೇರದಾಳ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ, ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರಾಗಿರುವ ನೇಕಾರರ ಕಷ್ಟ-ಕಾರ್ಪಣ್ಯಗಳನ್ನು ಬಲ್ಲವನಾಗಿದ್ದು, ಭಾಜಪ ಪಕ್ಷದ ಏಳಿಗೆಗಾಗಿ ದುಡಿದಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವರಿಷ್ಠರು ಅವಕಾಶ ನೀಡುತ್ತಾರೆ ಎಂದು ವಿಶ್ವಾಸವಿದೆ ಎಂದು ಹೇಳಿದರು.