ರಾಮದುರ್ಗ

ಸಂಕಷ್ಟದಲ್ಲಿರುವ ನೇಕಾರ ಸಮುದಾಯಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮನವಿ

ಸಂಕಷ್ಟದಲ್ಲಿರುವ ನೇಕಾರ ಸಮುದಾಯಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ   ಮನವಿ

ರಾಮದುರ್ಗ: ಕೊರೊನಾ ನಿಯಂತ್ರಣ ಹಾಗೂ ಲಾಕ್ ಡೌನ್ ನಿಂದಾ ರಾಜ್ಯದ ನೇಕಾರ ಸಮುದಾಯವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ, ಕಾರಣ ರಾಜ್ಯ ಸರಕಾರ ಶ್ರಮಿಕ ವರ್ಗದ ಕೊರೊನಾ ಪರಿಹಾರ ವಿಶೇಷ ಪ್ಯಾಕೇಜನಲ್ಲಿ ನೇಕಾರ ಸಮುದಾಯವನ್ನು ಸೇರಿಸುವ ಮೂಲಕ ನೇಕಾರ ಸಮುದಾಯಕ್ಕೂ ಪರಿಹಾರ ನೀಡಬೇಕೆಂದು ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ನೇಕಾರರ ಮಗ್ಗಗಳು ಸಂಪೂರ್ಣ ಸ್ಥಗಿತಗೊಂಡಿದ್ದಕ್ಕೆ ನೇಯ್ಗೆ ಉತ್ದಾದಿಸಲು ಬೇಕಾದ ಕಚ್ಚಾ ಸಾಮಗ್ರಿಗಳು ಲಭ್ಯವಿಲ್ಲಾ ಹಾಗೂ ಉತ್ಪಾದಿಸಿದ ಸಾಮಗ್ರಿಗಳಿಗೂ ಬೇಡಿಕೆ ಇಲ್ಲವಾಗಿದೆ, ಮದುವೆ ಮತ್ತು ಮಂಗಲ ಕಾರ್ಯಕಗಳು ಸ್ಥಗಿತಗೊಂಡಿದ್ದರಿಂದಾ ಮಾರಾಟ ಮಳಿಗೆಗಳು ಸಹ ಲಾಕಡೌನಿಂದಾ ಬಂದಾಗಿವೆ ಇದರಿಂದಾ ನೇಕಾರರು, ಕೂಲಿ ನೇಕಾರರ ಬದುಕು  ಬಹಳ ಸಂಕಷ್ಟದಲ್ಲಿದೆ. ರಾಮದುರ್ಗ ವಿಧಾನಸೌಭಾ ಮತಕ್ಷೇತ್ರದಲ್ಲಿಯೇ ಒಟ್ಟು 1574 ಕೈಮಗ್ಗ/ ವಿದ್ಯ್ಯುತಚಾಲಿತ ಘಟಕಳಿದ್ದು .3548 ಯಂತ್ರಗಳಲ್ಲಿ ಸುಮಾರು 4500 ಕೂಲಿ ನೇಕಾರರು ಕಾರ್ಯನಿರ್ವಹಿಸುತ್ತಿದ್ದಾರೆ ಕಾರಣ ಶೀಘ್ರದಲ್ಲಿಯೆ ನೇಕಾರ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಕ್ಷಣದಲ್ಲಿಯೇ ಸ್ಪಂದಿಸಿ ಒಂದು ವಾರದಲ್ಲಯೇ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಕೊರೊನಾದಿಂದಾ ಸಂಕಷ್ಟದಲ್ಲಿರುವ ನೇಕಾರ ಸಮುದಾಯಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಮನವಿ ಸಲ್ಲಿಸುತ್ತಿರುವ ಶಾಸಕ ಮಹಾದೇವಪ್ಪ ಯಾದವಾಡ.
 

ಸುದ್ದಿ ಓದಿ