ಅನಾಮಿಕ ವಯೋವೃದ್ಧೆಯ ಕುಟುಂಬದ ಪತ್ತೆಗೆ ಮನವಿ
ಕೊಪ್ಪಳ 24: ಅಂದಾಜು 70 ವರ್ಷದ ರುದ್ರಮ್ಮ ಎಂಬ ಹೆಸರಿನ ಅನಾಮಿಕ ವಯೋವೃದ್ಧೆಯ ಕುಟುಂಬದ ಪತ್ತೆಗಾಗಿ ಸಹಕರಿಸುವಂತೆ ಕೊಪ್ಪಳ ಸಖಿ-ಒನ್ ಸ್ಟಾಪ್ ಸೆಂಟರ್ ಆಡಳಿತಾಧಿಕಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಡಿಸೆಂಬರ್ 17ರಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ಅನಾಮಿಕ ವಯೋವೃದ್ಧೆಯ ಪ್ರಾಥಮಿಕ ವಿಚಾರಣೆ ವೇಳೆ ಈ ವೃದ್ಧೆಯ ಹೆಸರು ರುದ್ರಮ್ಮ ವಯಸ್ಸು ಅಂದಾಜು 70 ವರ್ಷ, ಸಾಽಽ ಮುದ್ದೇಬಿಹಾಳ ತಾಽಽಜಿಽಽ ಬಿಜಾಪುರ ಎಂದು ತಿಳಿದು ಬಂದಿರುತ್ತದೆ. ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ ತಿಳಿಸಿರುವಂತೆ ವಯೋವೃದ್ಧೆಯನ್ನು ಸಖಿ-ಒನ್ ಸ್ಟಾಪ್ ಸೆಂಟರ್ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆರೈಕೆ ಮತ್ತು ಪೋಷಣೆ ಮಾಡಲಾಗುತ್ತಿದೆ. ಈ ಬಾಧಿತ ವೃದ್ಧೆಯ ಕುಟುಬಸ್ತರು ಯಾರದು ಇದ್ದಲ್ಲಿ ಅಥವಾ ವಾರಸುದಾರರ ಮಾಹಿತಿ ಇದ್ದಲ್ಲಿ ಸಖಿ- ಒನ್ ಸ್ಟಾಪ್ ಸೆಂಟರ್ (ಜಿಲ್ಲಾ ಆಸ್ಪತ್ರೆ), ಕೊಪ್ಪಳ ದೂ.ಸಂ; 08539-225941, ಈ ವಿಳಾಸಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.