ಮಠದ ಬಾವಿಗೆ ಗಡಗಡೆ ಜೋಡಿಸುವಂತೆ ಮನವಿ

ಮಠದ ಬಾವಿಗೆ ಗಡಗಡೆ ಜೋಡಿಸುವಂತೆ ಮನವಿ

ಶಿರಹಟ್ಟಿ 09 :ಪಟ್ಟಣದ ಶ್ರೀ ಜಗದ್ಗುರು ಫಕ್ಕಿರೇಶ್ವರ ಮಠದ ಹತ್ತಿರ ಇರುವ ಕುಡಿಯುವ ನೀರಿನ ಭಾವಿಯು ಪಟ್ಟಣದ ಸಾರ್ವಜನಿಕರ ನೀರಿನ ದಾಹವನ್ನು ತೀರಿಸುವ ಏಕೈಕ ಕುಡಿಯುವ ನೀರಿನ ಭಾವಿಯಾಗಿದ್ದು, ಈ ಭಾವಿಯ ನೀರಿಗಾಗಿ ಧಾವಿಸುವ ಸಾರ್ವಜನಿಕರಿಗೆ ಕೆಲವೇ ಗಡಗಡೆಗಳಿದ್ದು ಅವೂ ಕೂಡ ದುರಸ್ತಿಯಲ್ಲಿದ್ದು ನೀರನ್ನು ಎತ್ತಲು ತೊಂದರೆಯಾಗುತ್ತಿದ್ದುದರ ಕಾರಣ ಸಾರ್ವಜನಿಕರಿಗೆ ಸಲೀಸಾಗಿ ನೀರನ್ನು ಎತ್ತಲು ಅನುಕೂಲವಾಗುವಂತೆ ಹೊಸ ಗಡಗಡೆ ಯಂತ್ರಗಳನ್ನು ಅಳವಡಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ ಮಲ್ಲೇಶ ಅವರಿಗೆ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕಾಧ್ಯಕ್ಷ ಹಸನ ತಹಶೀಲ್ದಾರ ಮನವಿ ಸಲ್ಲಿಸಿದರು.

ಇಡೀ ಶಿರಹಟ್ಟಿಯಲ್ಲಿಯೇ ಈ ಮಠದ ಭಾವಿಯು ಇದ್ದಿದ್ದು ನಮ್ಮ ಪಟ್ಟಣದ ಪುಣ್ಯವಾಗಿದೆ, ಇಲ್ಲಿ ನೀರನ್ನು ಜಗ್ಗಲು ಕೇವಲ ನಾಲ್ಕು ಗಡಗಡಿಗಳು ಮಾತ್ರ ಇದ್ದು, ಅದು ಸಾರ್ವಜನಿಕರಿಗೆ ಸಾಲುತ್ತಿಲ್ಲ ಅವುಗಳು ಸಹ ದುರಸ್ಥಿಗೆ ಬಂದಿವೆ ಇದರಿಂದ ನೀರು ಜಗ್ಗುವ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಭಾವಿಯ ಸ್ಥಳವನ್ನು ಪರಿಶೀಲಿಸಿ ಕುಡಿಯುವ ಭಾವಿಗೆ ಅವಶ್ಯವಿರುವ ನೀರು ಜಗ್ಗುವ ಯಂತ್ರಗಳನ್ನು (ಗಡಗಡಿಗಳನ್ನು) ತಕ್ಷಣವೇ ಅಳವಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ಪ್ರಜಾಪರ ವೇದಿಕೆ ಶಿರಹಟ್ಟಿ ಘಟಕದ ವತಿಯಿಂದ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಎಂ ಮಲ್ಲೇಶ, ಶಿರಹಟ್ಟಿ ಪಟ್ಟಣದ ಶುದ್ಧ ನೀರಿನ ಘಟಕಗಳನ್ನು ಆದಷ್ಟು ಬೇಗನೆ ಸರಿಪಡಿಸಿ ಸಾರ್ವಜನಿಕರಿಗೆ ಶುದ್ಧ ನೀರಿನ ಅನುಕೂಲ ಮಾಡಿಕೊಡುತ್ತೇನೆ ಹಾಗೂ ಶ್ರೀ ಜಗದ್ಗುರು ಫಕ್ಕೀರೇಶ್ವರ ಮಠದ ಹತ್ತಿರ ಇರುವ ಬಾವಿಗೆ ಅವಶ್ಯವಿರುವ ಗಡಗಡಿಗಳನ್ನು ಆದಷ್ಟು ಬೇಗೆನೆ ಅಳವಡಿಸುತ್ತೇನೆ ಎಂದು ಹೇಳಿದರು.   

ಅಜ್ಜಪ್ಪ ಬಿಡವೆ, ಬಸವರಾಜ ಮಠಪತಿ, ಮಂಜುನಾಥ ಬಳಿಗಾರ ಇದ್ದರು.

ಸುದ್ದಿ ಓದಿ