ಟೋಕಿಯೊ ಒಲಿಂಪಿಕ್ ಸಮಿತಿಯ ಮತ್ತೊರ್ವರಲ್ಲಿ ಕೊರೊನಾ
ಟೋಕಿಯೊ, ಅಕ್ಟೋಬರ್.6 : ಮುಂದಿನ ವರ್ಷ ಜಪಾನ್‌ನ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾ ಕೂಟದ ಸಮಿತಿಯ ಮತ್ತೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್‌ನ ಐದನೇ ಪ್ರಕರಣ ಬಹಿರಂಗವಾಗಿದೆ.
ಸಂಘಟನಾ ಸಮಿತಿ ಮಂಗಳವಾರ ಈ ಮಾಹಿತಿಯನ್ನು ನೀಡಿದೆ. ಟೋಕಿಯೋ 2020 ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 40 ವರ್ಷದ ಮಹಿಳೆ ಕೊರೊನಾ ವೈರಸ್‌ಗೆ ತುತ್ತಾಗಿರುವುದು ಕಂಡುಬಂದಿದೆ ಎಂದು ಸಮಿತಿ ತಿಳಿಸಿದೆ. ಸಂಸ್ಥೆಯೊಳಗೆ ವರದಿಯಾದ ಕರೋನಾ ಸೋಂಕಿನ ಐದನೇ ಪ್ರಕರಣ ಇದಾಗಿದೆ.
ಮಹಿಳೆ ಪ್ರಸ್ತುತ ಕಚೇರಿಯಲ್ಲಿಲ್ಲ ಮತ್ತು ಅವರು ಕೊನೆಯದಾಗಿ ಸೆಪ್ಟೆಂಬರ್ 28 ರಂದು ಕಚೇರಿಗೆ ಬಂದಿದ್ದರು. "ಟೋಕಿಯೋ 2020 ಸಮಿತಿಯು ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಮುಂದುವರಿಸುವುದರಿಂದ ನೌಕರರು ಸುರಕ್ಷಿತ ಕೆಲಸದ ವಾತಾವರಣವನ್ನು ಹೊಂದಬಹುದು" ಎಂದು ಸಮಿತಿ ತಿಳಿಸಿದೆ.
ಜಪಾನ್‌ನಲ್ಲಿ ಸೋಮವಾರ 281 ಹೊಸ ಪ್ರಕರಣಗಳು ದೃಢಪಟ್ಟಿದ್ದು ಗಮನಾರ್ಹವಾಗಿದೆ, ಈ ಪೈಕಿ 66 ಪ್ರಕರಣಗಳು ಟೋಕಿಯೊದಲ್ಲಿ ದಾಖಲಾಗಿದೆ.