ಮಹಲಿಂಗಪುರ

ಪೌರ ಕಾರ್ಮಿಕರಿಂದ ಸರಕಾರಕ್ಕೆ ಮನವಿ

ಪೌರ ಕಾರ್ಮಿಕರಿಂದ ಸರಕಾರಕ್ಕೆ ಮನವಿ

ಮಹಾಲಿಂಗಪುರ 16: ಸ್ಥಳೀಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಂ. ಕೆ. ದಳವಾಯಿ ಅವರ ನೇತೃತ್ವದಲ್ಲಿ ಪುರಸಭಾ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. 

ಮ್ಯಾನ್ ಹೋಲ್ ನಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ, ಅವರು ಬಯಸಿದ ಸ್ಥಳದಲ್ಲಿ ಅನುಕಂಪದ ಆಧಾರದಲ್ಲಿ ನೌಕರಿ ನೀಡಬೇಕು. ರಾಜ್ಯದಲ್ಲಿ ಅತ್ಯಂತ ಅಭದ್ರತೆ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಬಾಕಿ ಉಳಿದಿರುವ ಹುದ್ದೆಗಳ ನೇರ ನೇಮಕಾತಿ ಮಾಡುವ ಮೂಲಕ ಸರ್ಕಾರ ಚಾಲನೆ ನೀಡಬೇಕು. ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅತ್ಯಗತ್ಯ ಸೇವೆ ನಿರ್ವಹಿಸುವ, ತ್ಯಾಜ್ಯ ಸಾಗಿಸುವ ವಾಹನ ಚಾಲಕರು, ವಾಟರ್ ಮೆನ್, ಡಾಟಾ ಆಪರೇಟರುಗಳಿಗೆ ಹಲವೆಡೆ ಸಕಾಲಕ್ಕೆ ಸೂಕ್ತ ವೇತನ ನೀಡುತ್ತಿಲ್ಲ. ಅತ್ಯಂತ ಅಭದ್ರತೆಯಲ್ಲಿರುವ ನೌಕರರಿಗೆ ತಕ್ಷಣ ವೇತನ ಬಿಡುಗಡೆ ಮಾಡುವ ಜೊತೆಗೆ ಗುತ್ತಿಗೆ ಬದಲಿಗೆ ನೇರ ವೇತನ ಪಾವತಿಸುವಂತೆ ಕೋರಿ ಮನವಿ ಸಲ್ಲಿಸಿ, ಇಡೀ ದಿನ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿ, ಕರ್ತವ್ಯ ನಿರ್ವಹಿಸಿದರು.  

ಪುರಸಭಾ ಮುಖ್ಯಾಧಿಕಾರಿ ಎಚ್‌. ಎಸ್‌. ಚಿತ್ತರಗಿ, ಬಿ. ವೈ. ಮರದಿ, ರಾಘವೇಂದ್ರ ನಡುವಿನಮನಿ, ರವಿ ಹಲಸಪ್ಪಗೋಳ, ಮಹಾಲಿಂಗ ಗಸ್ತಿ, ನಾಮದೇವ ಲಮಾಣಿ ಇತರರು ಇದ್ದರು. 


ಸುದ್ದಿ ಓದಿ