ಅಮೆರಿಕಾ ಏಕ ಪಕ್ಷೀಯ ತೀರ್ಮಾನ... ಖಂಡಿಸಿದ ತಾಲಿಬಾನಿಗಳು !
ಕಾಬೂಲ್ / ಬೀಜಿಂಗ್, ಆಗಸ್ಟ್ 30 ಕಾಬೂಲ್ ನಲ್ಲಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ಹತ್ತಿಕ್ಕಲು ಅಮೆರಿಕಾ ನಡೆಸಿರುವ ಡ್ರೋನ್ ದಾಳಿಗಳನ್ನು ಖಂಡಿಸುವುದಾಗಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಏಕಪಕ್ಷೀಯ ನಿರ್ಧಾರ ಕೈಗೊಂಡು ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅವರು ಬುದ್ದಿ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಪಡೆಗಳ ವಾಪಸ್ಸು ಪಡೆದುಕೊಳ್ಳುವ ಗಡುವು ಮುಗಿಯುತ್ತಿರುವ ಹಿನ್ನಲೆಯಲ್ಲಿ ಐಸಿಸ್-ಖೊರಾಸನ್ ಗುಂಪು ಇತ್ತೀಚೆಗೆ ಭಯೋತ್ಪಾದಕ ದಾಳಿಗಳನ್ನು ನಡೆಸಿತ್ತು. ಎಂದು ಕಾಬೂಲ್ ವಿಮಾನ ನಿಲ್ದಾಣದ ಬಳಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 100 ಕ್ಕೂ ಹೆಚ್ಚು ಸಾಮಾನ್ಯ ನಾಗರಿಕರು ಹಾಗೂ 13 ಮಂದಿ ಅಮೆರಿಕಾ ಸೈನಿಕರು ಸಾವನ್ನಪ್ಪಿದ್ದಾರೆ.
ಈ ಹಿನ್ನಲೆಯಲ್ಲಿ ಅಮೆರಿಕಾ ಯೋಧರನ್ನು ಗುರಿಯಾಗಿಸಿ ಭಾನುವಾರ ಮತ್ತೊಮ್ಮೆ ರಾಕೆಟ್ ದಾಳಿಗಳು ನಡೆದಿರುವ ವರದಿ ಹಿನ್ನಲೆಯಲ್ಲಿ ಅಮೆರಿಕಾ ಈ ವಿಷಯವನ್ನು ದೃಢೀಕರಿಸಿದೆ. ಅಲ್ಲದೆ, ಅವರನ್ನು ಸದೆಬಡಿದಿರುವುದಾಗಿ ತಿಳಿಸಿದೆ. ಆದೇ ರೀತಿ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ ಭಾರಿ ಪ್ರಮಾಣದ ಸ್ಫೋಟಕ ಸಾಧನ ಬಳಸಲಾಗಿದ್ದು, ಇದರಿಂದ ಉಂಟಾಗಿರುವ ಹಾನಿಯನ್ನು ಅಂದಾಜಿಸುತ್ತಿರುವುದಾಗಿ, ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದೆ.
ಈ ಹಿನ್ನಲೆಯಲ್ಲಿ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅಮೆರಿಕಾ ಕ್ರಮವನ್ನು ಖಂಡಿಸಿದ್ದಾರೆ. ಚೈನಾದ ಸರ್ಕಾರಿ ಟೆಲಿವಿಷನ್ ಸಿಜಿಟಿಎನ್ ಜೊತೆ ಮಾತನಾಡುತ್ತಾ. ಅಮೆರಿಕಾ ಕ್ರಮವನ್ನು ಅವರು ಖಂಡಿಸಿದರು. ತಮಗೆ ಯಾವುದೇ ಸೂಚನೆ ನೀಡದೆ ನಡೆಸಿದ ಈ ದಾಳಿಯಲ್ಲಿ ಏಳು ನಾಗರಿಕರು ಸಾವನ್ನಪ್ಪಿದ್ದಾರೆ, ಎಂದು ಅವರು ಹೇಳಿದ್ದಾರೆ.
ಈ ಸಂಬಂಧ .. ‘‘ ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ಅಪಾಯ ಸಂಭವಿಸಲಿದೆ ಎಂದು ಅವರು ಭಾವಿಸಿದರೆ .. ನಮಗೆ ಆ ವಿಷಯ ಮೊದಲು ಹೇಳಬೇಕು. ಆದರೆ ಈ ರೀತಿ ಏಕಪಕ್ಷೀಯ ನಿರ್ಧಾರಗಳು ಜೀವಹಾನಿಗೆ ಕಾರಣವಾಗುತ್ತವೆ ಎಂದು ಹೇಳಿದರು. " ವಿದೇಶಿ ನೆಲದಲ್ಲಿ ಇಂತಹ ಕೃತ್ಯಗಳನ್ನು ಎಸಗುವುದು ಕಾನೂನುಬಾಹಿರ ಎಂದು ತಾಲಿಬಾನ್ ವಕ್ತಾರರು ಹೇಳಿದ್ದಾರೆ.