ಅಂಬೇಡ್ಕರ್ ಅವರ 135 ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ119. ಜನ್ಮದಿನಾಚರಣೆ
ರಾಣೆಬೆನ್ನೂರು 15 : ಸಮಾಜದಲ್ಲಿ ಸಮಾನತೆಗೆ ಮಾನತೆಗೆ ಡಾ ಬಿ. ಆರ್ ಅಂಬೇಡ್ಕರ್ ಅವರು ನೀಡಿದ ಕೊಡುಗೆ ವಿಶ್ವದ ಎಲ್ಲ ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡಿವೆ, ಮೆಚ್ಚಿಕೊಂಡಿವೆ, ಅವರ ವಿಚಾರಧಾರೆಗಳು ಸಮಾನತೆಗೆ ನೀಡಿದ ಸಂವಿಧಾನ ಅಪ್ಪಿಕೊಂಡಿವೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಅವರು ಮಂಗಳವಾರ ನಗರಸಭಾ ಆಭರಣದಲ್ಲಿ ತಾಲೂಕ ಆಡಳಿತ, ತಾಪಂ ಸಮಾಜ ಕಲ್ಯಾಣ ಇಲಾಖೆ ನಗರಸಭೆ , ಮತ್ತು ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಇತರೆ ಒಕ್ಕೂಟಗಳ ಆಯೋಜಿಸಿದ್ದ, ಅಂಬೇಡ್ಕರ್ ಅವರ 135 ಡಾಕ್ಟರ್ ಬಾಬು ಜಗಜೀವನ್ ರಾಮ್ ರವರ119. ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಮಾನತೆ ಎಲ್ಲರ ಹಕ್ಕು, 12ನೇ ಶತಮಾನದ ಬಸವಣ್ಣನವರ ಸಮ ಸಮಾಜದ ಕನಸು ಇಂದು ನನಸಾಗುತ್ತಿರುವು ದು ಡಾ.ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಎನ್ನುವುದನ್ನು ಯಾರೂ ಮರೆಯುವಂತಿಲ್ಲ ಎಂದರು.
ದೇಶದ ಅಭಿವೃದ್ಧಿ, ಆರ್ಥಿಕತೆ ಮತ್ತು ಶೈಕ್ಷಣಿಕ, ಸಮಾನತೆ, ಪ್ರಗತಿಯಿಂದ ಮಾತ್ರ ಸಾಧ್ಯವಿದ್ದು ಅಂಬೇಡ್ಕರ್ ಅವರ ಸಂವಿಧಾನದ ವಿಚಾರಧಾರೆಗಳನ್ನು ಅರ್ಥಮಾಡಿಕೊಂಡು ಸಾಗಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಅಂದು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಬಹು ದೂರ ದೃಷ್ಟಿ ಪರಿಣಾಮ, ಇಂದಿಗೂ ಅನ್ನದ ಕೊರತೆ ಇಲ್ಲದೆ ಪ್ರತಿಯೊಬ್ಬರು ಹೊಟ್ಟೆ ತುಂಬಾ ಊಟ ಮಾಡಿ ಬದುಕುತ್ತಿದ್ದೇವೆ. ಅವರು ಅಂದು ಅನುಸರಿಸಿದ ವೈಜ್ಞಾನಿಕ ಕ್ರಾಂತಿ ಭವಿಷ್ಯದ ಜನಾಂಗಕ್ಕೆ ಮಾದರಿಯಾಗಿದೆ ಎಂದು ಪ್ರಕಾಶ್ ಕೋಳಿವಾಡ ಸ್ಮರಿಸಿದರು. ವೇದಿಕೆಯಲ್ಲಿ ನಗರಸಭಾ ಪೌರಾಯುಕ್ತ ಎಫ್ ಐ ಇಂಗಳಗಿ, ತಹಶೀಲ್ದಾರ ಆರ್ ಹೆಚ್ ಭಾಗವಾನ, ನಗರ ಪ್ರಾಧಿಕಾರದ ಅಧ್ಯಕ್ಷ ವೀರೇಶ್ ಮೋಟಗಿ ತಾಪಂ ಅಧಿಕಾರಿ ವೆಂಕಟೇಶ ಸಣ್ಣಬಿದರಿ, ಪುಟ್ಟಪ್ಪ ಮರಿಯಮ್ಮನವರ್, ಪ್ರಕಾಶ್ ಪೂಜಾರ್, ಚಂದ್ರ್ಪ ಬೇಡರ, ನೀಲಕಂಠಪ್ಪ ಕುಶಗೂರ, ಸಣ್ಣ ತಮ್ಮಪ್ಪ ಬಾರ್ಕಿ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ್, ಮಲ್ಲೇಶಪ್ಪ ಮದ್ಲೆರ, ರಮೇಶ್ ಕೊರವರ, ಮಾಲತೇಶ್ ಬ್ಯಾಡಗಿ, ಮೈಲಪ್ಪ ಗೋಣಿಬಸಮ್ಮನವರ, ಎಂ ಡಿ ಮೆಣಸಿನಹಾಳ, ಮೈಲಪ್ಪ ದಾಸಪ್ಪನವರ,ಮತ್ತಿತರರು ,
ಸಮಾಜದ ಗಣ್ಯರು ಉಪಸ್ಥಿತರಿದ್ದರು. ಡಾ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಜೀವನ ಸಾಧನೆ ಕುರಿತು ಪ್ರೊ. ಮೋಹನ್ ಬೆಣಗೇರಿ ಮತ್ತು ಡಾ. ಮಾಲತೇಶ್ ಪೂಜಾರ ಉಪನ್ಯಾಸ ನೀಡಿದರು. ಹರಳಯ್ಯ ನಗರದ ಶ್ರೀ ಮಾಯಮ್ಮ ದೇವಸ್ಥಾನ ದಿಂದ ಹೊರಟ ಭವ್ಯ ತೈಲ ಭಾವಚಿತ್ರದ ಬೃಹತ್ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ವೃತ್ತದ ಸಭಾ ವೇದಿಕೆಗೆ ಸಾಂಗತ್ಯಗೊಂಡಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಸಾಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಚಿನ್ ಮೆಣಸಿನಹಾಳ್ ಪ್ರಾರ್ಥಿಸಿದರು. ಪರಶುರಾಮ ಬಣಕಾರ್ ಸಂಗಡಿಗರು, ನಾಡಗೀತೆ ಹಾಡಿದರು. ಬಿಇಓ ಶ್ಯಾಮಸುಂದರ ಅಡಿಗ ಸ್ವಾಗತಿಸಿ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಕಾವ್ಯಶ್ರೀ ಸಂವಿಧಾನ ಓದು ಪ್ರತಿಜ್ಞಾವಿಧಿ ಬೋಧಿಸಿದರು. ನಂತರ ಜನನಿ ಜಾನಪದ ಕಲಾ ತಂಡದವರಿಂದ ವೈವಿಧ್ಯಮಯ ಜನಪದ ಕಾರ್ಯಕ್ರಮ ನಡೆಯಿತು