ಮಹಲಿಂಗಪುರ

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‍ಗೆ ಪದಾಧಿಕಾರಿಗಳ ಆಯ್ಕೆ

ಆಲ್ ಇಂಡಿಯಾ ಇಮಾಮ್ಸ್  ಕೌನ್ಸಿಲ್‍ಗೆ ಪದಾಧಿಕಾರಿಗಳ ಆಯ್ಕೆ

ಮಹಾಲಿಂಗಪುರ 10: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಆಲ್ ಇಂಡಿಯಾ ಇಮಾಮ್ಸ್  ಕೌನ್ಸಿಲ್ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾಗಿ ಮೌಲಾನಾ ರಂಜಾನಸಾಬ್ ಗಣಶೈದ ಕಾಲೇಖಾನ ಹಾಗೂ ಉಪಾಧ್ಯಕ್ಷರಾಗಿ ಹಾಫೀಜ ಮಹ್ಮದಅಲಿ ಮುಲ್ಲಾ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಗಳಾಗಿ ಮೌ.ರಸೂಲ ಜಮಾದಾರ್  ಮೌ. ಇಕ್ಬಾಲ್ ನಗಾರ್ಚಿ, ಖಜಾಂಚಿ ಕಾರಿ ಫಾರೂಕ್ ತಾಸವಾಲೆ ಹಾಗೂ ರಾಜ್ಯಾಧ್ಯಕ್ಷರಾದ   ಮೌಲಾನಾ ಅತಿಕುರ್ರ ರಹಮಾನ ಮತ್ತು ಗುಲ್ಬರ್ಗಾ ಜಿಲ್ಲಾ ಅಧ್ಯಕ್ಷರಾದ ಮೌಲಾನಾ ಇಬ್ರಾಹಿಂಸಾಬ್ ಆಲ್ ಇಂಡಿಯಾ ಇಮಾಮ್ಸ್  ಕೌನ್ಸಿಲ್ ಇವರ ನೇತೃತ್ವದಲ್ಲಿ ನೆರವೇರಿತು.

ಸಭೆಯಲ್ಲಿ ಹಾಜರಾದ ಮೌ.ಜಕ್ರಿಯಾಸಾಹಬ ಅನ್ಸಾರಿ, ಮೌ ಸಮೀರ್ ಸಾಹಬ ಬಿಸ್ತಿ, ಹಾಫಿಜ್ ನಜೀರ್, ಹಾಫಿಜ್ ಅಬಿದ್, ಹಾಫೀಜ್ ಮಹಬೂಬ್ ಇನ್ನೂ ಮುಂತಾದ ಮೌಲಾನಾ,  ಹಾಫೀಜರು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ