ಚುಂಚವಾಡ ಗ್ರಾಮದಲ್ಲಿ ಕೃಷಿ ರೈತ ಕ್ಷೇತ್ರ ಪಾಠಶಾಲೆ
ಖಾನಾಪುರ 24: ತಾಲೂಕಿನ ಬೀಡಿ ವಲಯದ ಚುಂಚವಾಡ ಗ್ರಾಮದಲ್ಲಿ ನಡೆದ ಸುಧಾರಿತ ಭತ್ತದ ಬೇಸಾಯ ಪದ್ಧತಿಯಲ್ಲಿ ಯಾಂತ್ರಿಕರಣ ಅಳವಡಿಕೆ ಕೃಷಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಂಎಂ ಚಿಕ್ಕೋಡಿ ಯವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸುಧಾರಿತ ಭತ್ತ ಬೇಸಾಯದಲ್ಲಿ ತಾಂತ್ರಿಕತೆ ಹಾಗೂ ಯಾಂತ್ರಿಕರಣ ಅಳವಡಿಕೆ ಬಗ್ಗೆ ಕೃಷಿ ವಿಸ್ತರಣಾಧಿಕಾರಿ ಎಲ್ಲಪ್ಪ ಸಾಗರ್ ಅವರು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಬೈರು ಮಾಂಡವಿ ಗ್ರಾಮದ ಗಣ್ಯರಾದ ದಶರಥ ಪಾಟೀಲ್ ಹಾಗೂ ಬಸಪ್ಪ ಅವರಾದಿ ಧರ್ಮೇಂದ್ರ ಪಾಶೆಟ್ಟಿ, ಜಬ್ಬರಲಿ ಹಲಸಗಿ ಹಾಗೂ ಒಕ್ಕೂಟದ ಅಧ್ಯಕ್ಷ ಸಾವಿತ್ರಿ ಬಶೆಟ್ಟಿಯವರು ಉಪಸ್ಥಿತರಿದ್ದರು.
ನಿರೂಪಣೆ ವಲಯದ ಮೇಲ್ವಿಚಾರಕರು ಪ್ರವೀಣ, ಸ್ವಾಗತ ಕೃಷಿ ಮೇಲ್ವಿಚಾರಕರು ಶಿವನಗೌಡ, ವಂದನಾರೆ್ಣ ಸೇವಾಪ್ರತಿನಿಧಿ ರೇಣುಕಾ ನಡೆಸಿ ಕೊಟ್ಟರು.
ಊರಿನ ಕೃಷಿಕರು ಸಂಘದ ಸದಸ್ಯರು ಊರಿನ ಸದಸ್ಯರು ಉಪಸ್ಥಿತರಿದ್ದರು.