ಅಂತರರಾಷ್ಟ್ರೀಯ

ಅಫ್ಗನರು ಒಂದಾಗಿ ದೇಶದ ಭವಿಷ್ಯ ನಿರ್ಧರಿಸಬೇಕು; ಅಮೆರಿಕ ರಾಯಭಾರಿ

ಅಫ್ಗನರು ಒಂದಾಗಿ ದೇಶದ ಭವಿಷ್ಯ ನಿರ್ಧರಿಸಬೇಕು; ಅಮೆರಿಕ ರಾಯಭಾರಿ

ವಾಷಿಂಗ್ಟನ್, ಆ 31  ಅಫ್ಗನಿಸ್ತಾನದಿಂದ ಅಮೆರಿಕ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿರುವ ಹಿನ್ನೆಲೆಯಲ್ಲಿ ಈಗ ಅಫ್ಗನ್ನರು ಸಂಪೂರ್ಣ ಸಾರ್ವಭೌಮತ್ವದಲ್ಲಿ ತಮ್ಮ ದೇಶದ ಭವಿಷ್ಯದ ಮಾರ್ಗ ಆರಿಸಿಕೊಳ್ಳಬಹುದು ಎಂದು ಅಫ್ಘಾನಿಸ್ತಾನದಲ್ಲಿನ ಅಮೆರಿಕದ ವಿಶೇಷ ಪ್ರತಿನಿಧಿ ಜಲ್ಮೇ ಖಲೀಲ್ಜಾದ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, "ನಮ್ಮ ಸೇನೆ ಹಾಗೂ ಜೊತೆಗಿದ್ದ ಅನೇಕ ಪಾಲುದಾರರ ನಿರ್ಗಮನದೊಂದಿಗೆ ಅಫ್ಗಾನಿಯರಿಗೆ ಒಂದು ಉತ್ತಮ ಅವಕಾಶ ಲಭ್ಯವಿದೆ. ಈಗ ಅವರ ದೇಶದ ಭವಿಷ್ಯ ಅವರ ಕೈಯಲ್ಲಿದೆ. ಅವರು ಸಂಪೂರ್ಣ ಸಾರ್ವಭೌಮತ್ವದಲ್ಲಿ ತಮ್ಮ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ. ಇದು ಅವರ ಯುದ್ಧವನ್ನು ಅಂತ್ಯಗೊಳಿಸುವ ಅವಕಾಶ ಕೂಡ ಹೌದು" ಎಂದಿದ್ದಾರೆ.
ಅಫ್ಗಾನ್‌ನಲ್ಲಿ ಸಿಲುಕಿದ್ದ ಜನರನ್ನು ಹೊತ್ತ ಕೊನೆಯ ಅಮೆರಿಕ ವಿಮಾನ, ಭಾನುವಾರ ರಾತ್ರಿ 3.29ಕ್ಕೆ ಹಾರಾಟ ಆರಂಭಿಸಿದೆ. ಇದು ಅಫ್ಗಾನಿಸ್ತಾನದಲ್ಲಿ ಅಮೆರಿಕದ 20 ವರ್ಷಗಳ ಯುದ್ಧದ ಅಂತ್ಯವನ್ನು ಸೂಚಿಸುತ್ತದೆ. ಈಗ ಮತ್ತು ತಾಲಿಬಾನ್ ಇಡೀ ದೇಶದ ಸಂಪೂರ್ಣ ನಿಯಂತ್ರಣ ಹೊಂದಲಿದೆ.
ಅಫ್ಘಾನಿಸ್ತಾನವನ್ನು ಸಮೃದ್ಧ ಭವಿಷ್ಯಕ್ಕೆ ಕೊಂಡೊಯ್ಯುವ ಪರೀಕ್ಷೆ ತಾಲಿಬಾನ್ ಮುಂದಿದೆ  ಎಂದು ಖಲೀಲ್ಜಾದ್ ಹೇಳಿದ್ದಾರೆ.

ಸುದ್ದಿ ಓದಿ