ಅಂತರರಾಷ್ಟ್ರೀಯ

ಅಫ್ಗಾನ್‌ ಈಗ ಸಂಪೂರ್ಣವಾಗಿ ತಾಲಿಬಾನ್‌ ತೆಕ್ಕೆಗೆ!

ಅಫ್ಗಾನ್‌ ಈಗ ಸಂಪೂರ್ಣವಾಗಿ ತಾಲಿಬಾನ್‌ ತೆಕ್ಕೆಗೆ!

ಮಾಸ್ಕೋ, ಆ 31 ಅಫ್ಗಾನಿಸ್ತಾನದಲ್ಲಿದ್ದ ಎಲ್ಲಾ ವಿದೇಶಿ ಮಿಲಿಟರಿ ಪಡೆ ದೇಶ ತೊರೆದಿದ್ದು, ಈಗ ಸಂಪೂರ್ಣ ರಾಷ್ಟ್ರ  ತಾಲಿಬಾನ್ (ರಷ್ಯಾದಲ್ಲಿ ನಿಷೇಧಿಸಲ್ಪಟ್ಟ ಭಯೋತ್ಪಾದಕ ಗುಂಪು) ನಿಯಂತ್ರಣದಲ್ಲಿದೆ ಎಂದು ಅದರ ರಾಜಕೀಯ ಕಚೇರಿಯ ವಕ್ತಾರ ಮೊಹಮ್ಮದ್ ನಯೀಮ್‌ ಸ್ಪುಟ್ನಿಕ್‌ಗೆ ತಿಳಿಸಿದ್ದಾರೆ.
" ಕೊನೆಯ ವಿದೇಶಿ ಸೈನಿಕರು ಅಫ್ಗಾನಿಸ್ತಾನ ತೊರೆದಿದ್ದಾರೆ. ಈಗ ದೇಶದ ಸಂಪೂರ್ಣ ಪ್ರದೇಶ ತಾಲಿಬಾನ್ ನಿಯಂತ್ರಣದಲ್ಲಿದೆ. ಈಗ ನಮ್ಮ ರಾಜ್ಯ ಸ್ವತಂತ್ರವಾಗಿದೆ" ಎಂದು ಅವರು ತಿಳಿಸಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ತಮ್ಮ ತುಕಡಿಯನ್ನು ಆ.31ರೊಳಗೆ ತೆರವುಗೊಳಿಸಬೇಕು ಎಂದು ತಾಲಿಬಾನ್ ಪದೇ ಪದೇ ಒತ್ತಾಯಿಸುತ್ತಿತ್ತು. ಪಂಜಶೀರ್ ಪ್ರಾಂತ್ಯವನ್ನು ಹೊರತುಪಡಿಸಿ ದೇಶದ ಸಂಪೂರ್ಣ ಪ್ರದೇಶವನ್ನು ತಾಲಿಬಾನ್ ನಿಯಂತ್ರಿಸಲಿದೆ. ಅಲ್ಲಿ ಉತ್ತರ ಒಕ್ಕೂಟದ ಬ್ಯಾನರ್ ಅಡಿ ತಾಲಿಬಾನ್‌ ಅಧಿಕಾರ ಸ್ವೀಕರಿಸಲು ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ  ತಾಲಿಬಾನ್ ಅಧಿಕಾರವನ್ನು ಸ್ವೀಕರಿಸಲು ನಿರಾಕರಿಸಿದವರ ವಿರುದ್ಧ ಕ್ರಮ ಘೋಷಿಸಲಾಗಿದೆ.

ಸುದ್ದಿ ಓದಿ