ಜಗನ್ನಾತ ಮಹಾರಾಜರ ಸ್ಮರಣಾರ್ಥ ಆದ್ಯಾತ್ಮ ಸಪ್ತಾಹ
ಗುರ್ಲಾಪೂರ17: ಪ್ರಪಂಚ ಮಾಡುತ್ತಾ ಪಾರಮಾರ್ಥವನ್ನು ಸರಳವಾಗಿ ಗೆದ್ದರೆ ಜೀವನವು ಸುಖಮಯವಾಗಿ ದೇವರ ಪ್ರೀತಿಗೆ ಪಾತ್ರರಾಗಲು ಸಾಧ್ಯವೆಂದು ಅಭಿನವ ಮಂಜುನಾಥ ಶ್ರೀಗಳು ಹೇಳಿದರು.
ಅವರು ಚಢಎದಆಢದಢ ಶಿವಾಪೂರ(ಹ) ಗ್ರಾಮದಲ್ಲಿ ನಡೆದ ಮಾಧವಾನಂದ ಪ್ರಭುಜೀಯವರ ಹಾಗೂ ಗುರುಪುತ್ರೆಶ್ವರ ಮತ್ತು ಜಗನ್ನಾತ ಮಹಾರಾಜರ ಸ್ಮರಣಾರ್ಥ ಆದ್ಯಾತ್ಮ ಸಪ್ತಾಹದ ಸಾನಿಧ್ಯವಹಿಸಿ ಮಾತನಾಡಿ ಇಂಚಗೇರಿ ಸಂಪ್ರಧಾಯ ಶ್ರೇಷ್ಠವಾದದ್ದು ಭಕ್ತರಿಗೆ ಭಕ್ತಿ ಮಾಡಿ ಮುಕ್ತಿ ಪಡೆಯಲು ಯಾವದೇ ಆಡಂಬರ ಬೇಕಿಲ್ಲ ನಿಜವಾದ ಭಕ್ತಿ ಒಂದೇ ಸಾಕು.ದೇವಸ್ಥಾನ ಜಗ ಸುತ್ತಿದರೆ ಪ್ರಯೋಜನವಿಲ್ಲ ಸಮರ್ಥ ಸದ್ಗುರು ಮಾದವಾನಂದರು ಹೇಳಿದಂತ ಪುರಾಣ ಪ್ರವಚನ ಕೇಳಿ ಸನ್ಮಾರ್ಗದಲ್ಲಿ ಸಾಗಿದರೆ ಒಳ್ಳೇದಾಗುತ್ತದೆ. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತ ಸುಖವಾಗಿದ್ದರೆ ಜಗತ್ತೇ ಶಾಂತಿ ನೆಮ್ಮದಿಯಿಂದ ಇರುತ್ತದೆ ಎಂದು ಹೇಳಿದರು. ಶಂಕರೆಪ್ಪ ಮಹಾರಾಜರು ಅಧ್ಯಕ್ಷತೆ ವಹಿಸಿ ಮಾತನಾಡಿ ಪಾದಯಾತ್ರೆ, ಸತ್ಸಂಗದಲ್ಲಿ ಕೂಡುವದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದು. ಈಗಿನ ಯುವಕರು ಸನ್ಮಾರ್ಗ ಬಿಟ್ಟು ಕೆಟ್ಟ ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ತಂದೆ ತಾಯಿ ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ಆದ್ಯಾತ್ಮದ ದಾರಿ ತೋರಿಸಿ ಮಕ್ಕಳನ್ನು ಉದ್ದಾರ ಮಾಡಬೇಕೆಂದು ಹೇಳಿದರು.
ಈ ಸಮಯದಲ್ಲಿ ರಾಮಣ್ಣ ಮಹಾರಾಜರು. ವಸಂತ, ಹಾಗೂ ತಮ್ಮನ್ನಪ್ಪ ಮಹಾರಾಜರು,ಶಿವನಗೌಡ ಪಾಟೀಲ, ಅಲ್ಲಪ್ಪ ಕಿತ್ತೂರ, ಶಿವನಪ್ಪ ರೊಡ್ಡನ್ನವರ, ಎಸ್ ವಾಯ್ ಜುಂಜರವಾಡ, ಬಿ ಆರ್ ಸಾಯನ್ನವರ,ಕೆ ಜಿ ಮುಧೋಳ. ಸಮಾಜ ಸೇವಕ ಮುರಿಗೆಪ್ಪ ಮಾಲಗಾರ.ಎಮ್ ಎಸ್ ಡವಳೇಶ್ವರ. ರೇವನ್ನ ಪಾಟೀಲ ಸೇರಿದಂತೆ ಗ್ರಾಮದ ಗುರು ಹಿರಿಯರಿದ್ದರು. ಮಂಗಲಮಯ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು,