ನಟ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ: ಪೊಲೀಸರ ವಿಚಾರಣೆ

ನಟ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ: ಪೊಲೀಸರ ವಿಚಾರಣೆ

ಮೈಸೂರು/ಬೆಂಗಳೂರು,ಜುಲೈ 16 : ಸೆಲೆಬ್ರಿಟಿಯ ಅಹಂನಿಂದ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪ ಹಾಗೂ ದೂರಿನ ಕುರಿತು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಕಳೆದ ತಿಂಗಳ 25-26ರ ತಡರಾತ್ರಿ ಊಟ ಬಡಿಸುವ ವಿಚಾರದಲ್ಲಿ ಸಪ್ಲೈಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ.  ಓರ್ವ ಸಿಬ್ಬಂದಿ ಕಣ್ಣಿಗೆ ತೊಂದರೆಯಾಗಿದೆ ಎಂಬ ಆರೋಪದ ಬಗ್ಗೆ ನಜರ್ ಬಾದ್ ಠಾಣೆ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿ ಶುಕ್ರವಾರ ವಿಚಾರಣೆ ನಡೆಸಿದ್ದಾರೆ.

ಇನ್ಸ್ ಪೆಕ್ಟರ್ ಶ್ರೀಕಾಂತ್ ಉಪಸ್ಥಿತಿಯಲ್ಲಿ ಎಸಿಪಿ ಶಶಿಧರ್ ನೇತೃತ್ವದಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಗಂಗಾಧರ್ ಎಂಬುವರ ಬಳಿ ಹೇಳಿಕೆ ಪಡೆದುಕೊಳ್ಳಲಾಗಿದೆ.  ಈ ಸಂದರ್ಭದಲ್ಲಿ “ನಾನು ದಲಿತನಲ್ಲ ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು” ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಬಿಹಾರ ಮೂಲದ ಟ್ರೈನಿ ಸಿಬ್ಬಂದಿ ಸಮೀರ್ ಹಾಗೂ ಹೋಟೆಲ್ ಮಾಲೀಕ ಸಂದೇಶ್ ಅವರ ಹೇಳಿಕೆಯನ್ನೂ ಪಡೆಯಲಾಗಿದೆ. 

ಸುದ್ದಿ ಓದಿ