ರಾಣೆಬೆನ್ನೂರ

ಭವಿಷ್ಯದ ಚುನಾವಣೆ ಕ್ಷೇತ್ರದ ಗೆಲುವಿಗೆ ಕಾರ್ಯಕರ್ತರು ಸನ್ನ ದ್ದರಾಗಿದ್ದಾರೆ - ಮಂಜುನಾಥ ಗೌಡಶಿವಣ್ಣನವರ

ಭವಿಷ್ಯದ ಚುನಾವಣೆ ಕ್ಷೇತ್ರದ  ಗೆಲುವಿಗೆ ಕಾರ್ಯಕರ್ತರು ಸನ್ನ ದ್ದರಾಗಿದ್ದಾರೆ - ಮಂಜುನಾಥ ಗೌಡಶಿವಣ್ಣನವರ

ರಾಣೆಬೆನ್ನೂರು 08: ಈ ನಾಡಿನ ಬಡವರ, ದೀನದಲಿತರ, ಅಲ್ಪಸಂಖ್ಯಾತರ ಜನ ಸಾಮಾನ್ಯರ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ  ಜನ್ಮ ತಾಳಿದ, ಅತ್ಯಂತ ಗಟ್ಟಿತನದ, ತತ್ವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ ಜೆಡಿಎಸ್ ಎನ್ನುವುದು ಜನಸಾಮಾನ್ಯರ ಮನೆ ಮಾತಾಗಿದೆ ಅದರ ತತ್ವ ಮತ್ತು  ಸಿದ್ಧಾಂತ ಸಾಕಾರವಾಗಬೇಕಾದರೆ ಈ ನಾಡಿನ ಮತದಾರರು ಭವಿಷ್ಯದ ಚುನಾವಣೆಗೆ  ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ಪ್ರದೀಪ್ ಕುಮಾರ ಹೇಳಿದರು.

ಅವರು ರವಿವಾರ ಇಲ್ಲಿನ ಸಾಲೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಮತ್ತು ತಾಲೂಕಾ ಜೆಡಿಎಸ್ ಆಯೋಜಿಸಿದ್ದ ಬಿಎಲ್‌ಓ -  2 ವಿಶೇಷ ಸಮಗ್ರ ಪರಿಸ್ಕರಣೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಈ ನಾಡಿನ ಜನಾಶಯವನ್ನು, ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಸೇರಿದಂತೆ ಹಿಂದೆ ಆಡಳಿತ ಮಾಡಿದ ಬಿಜೆಪಿ ಪಕ್ಷವೂ ಸಹ ಜನಸಾಮಾನ್ಯರ ಆಸೆ ಈಡೇರಿಸಲು ಸಾಧ್ಯವಾಗಿಲ್ಲ ಎಂದು ಅವರು ಬಲವಾಗಿ ಆರೋಪಿಸಿದರು ಡಾ,ಅಂಬೇಡ್ಕರ್ ಸಂವಿಧಾನದ  ಅಡಿಯಲ್ಲಿ, ಡಾ. ಲೋಹಿಯಾ ವೈಚಾರಿಕ, ಸಾಮಾಜಿಕ, ಸಮಾನತೆ ಮತ್ತು ಜನ ಸಿದ್ಧಾಂತ ಆಶಯ ಹೊತ್ತು ರಾಮಕೃಷ್ಣ ಹೆಗಡೆ ಅವರಾದಿಯಾಗಿ ಹುಟ್ಟು ಹಾಕಿದ ಜಾತ್ಯಾತೀತ ನಿಲುವಿನ ರಾಜ್ಯದ ಏಕೈಕ ಪ್ರಾದೇಶಿಕ ಪಕ್ಷ ಇದಾಗಿದೆ.

ಎಂದರು. ದೇಶದ ಮಾಜಿ ಪ್ರಧಾನಿ ದೇವೇಗೌಡರ ಸಾಮಾಜಿಕ ನ್ಯಾಯದ   ನೀರೀಕ್ಷೆ, ಕುಮಾರಸ್ವಾಮಿಯವರ ವೈಚಾರಿಕ ಚಿಂತನೆ, ಜನಸಾಮಾನ್ಯರ ಸಮಾನತೆ, ನಾಡಿನ ಅಭಿವೃದ್ಧಿಗಾಗಿ ಗಟ್ಟಿ ಧ್ವನಿಯಾಗಿ   ಬೆಳೆದ ಜೆಡಿಎಸ್ ಪಕ್ಷ ಇದಾಗಿದೆ ಎಂದರು. ಭವಿಷ್ಯದ ಗ್ರಾಪಂ, ತಾಪಂ, ಜಿಪಂ ಸಂಘ ಸಂಸ್ಥೆಗಳ ಮತ್ತಿತರ ಯಾವುದೇ ಚುನಾವಣೆ ನಡೆದರೂ ಸಹ, ಅದು ಕಾರ್ಯಕರ್ತರ ಮೇಲೆ ನಿಂತಿರುವ ಚುನಾವಣೆ, ಮುಂದಿನ ಎಂಎಲ್‌ಎ- ಎಂಪಿ ಎಲ್ಲವೂ ಭವಿಷ್ಯದ  ಅಭಿವೃದ್ಧಿಗಾಗಿ ನಡೆಯುವ  ಚುನಾವಣೆಗಳಾಗಿದ್ದು, ಕಾರ್ಯಕರ್ತರು ಇಂದಿನಿಂದಲೇ  ಸನ್ನದ್ಧರಾಗಬೇಕು ಎಂದು  ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ  ಗೌಡಶಿವಣ್ಣನವರ ಅವರು, ಕಳೆದ ಚುನಾವಣೆ ಕ್ಷೇತ್ರದಲ್ಲಿ ಜೆಡಿಎಸ್ ಭದ್ರಕೋಟೆಯಾಗಿತ್ತು. ಚುನಾವಣೆ ಅಂತಿಮ ಘಳಿಗೆಯಲ್ಲಿ  ಪ್ರತಿ ಪಕ್ಷದವರ ಹಸಿ- ಹುಸಿ- ಬಿಸಿ ಆರೋಪ ಮತ್ತು ರಾಜಾರೋಷ ಹಣ ಚಲಾವಣೆಯ ಪರಿಣಾಮ ಸೋಲು ಅನುಭವಿಸಬೇಕಾಯಿತು ಎಂದರು.   ಕ್ಷೇತ್ರದಲ್ಲಿ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಭವಿಷ್ಯದ  ಚುನಾವಣೆ ಅತ್ಯಂತ ಸರಳವಾಗಿ ಎದುರಿಸಲು ಸನ್ನದ್ಧರಾಗಿ, ಶಕ್ತಿ ಹೊಂದಿದ್ದಾರೆ ಎಂದು ಮಂಜುನಾಥ ಅವರು  ಆತ್ಮವಿಶ್ವಾಸ ವ್ಯಕ್ತಪಡಿಸಿದಅಂದು ಆಡಳಿತದಲ್ಲಿದ್ದ   ಮುಖ್ಯಮಂತ್ರಿ ಕುಮಾರಸ್ವಾಮಿಗಳವರು, ಗ್ರಾಮ ವಾಸ್ತವ್ಯದ ಮೂಲಕ ನಾಡಿನ ಜನರ ಮನೆ ಮಾತಾಗಿದ್ದರು.  

 ಈ ಕ್ಷೇತ್ರದ ಬಗ್ಗೆ ಬಹು ಆಶಾಭಾವ ಹೊಂದಿದ್ದರು, ಅಂದಿನ ಸೋಲು ಮುಂದಿನ ಗೆಲುವು ಎನ್ನುವ ತಾತ್ವಿಕ ಸಿದ್ದಾಂತ ಅವರದಾಗಿದೆ ಎಂದರು. ಇನ್ನೋರ್ವ ರಾಜ್ಯ ವಕ್ತಾರ ಮಹೇಶಗೌಡ ಅವರು, ಚುನಾವಣಾ ಆಯೋಗವು ಮನೆ ಮನೆ ಭೇಟಿ ಮೂಲಕ ಮತದಾರರ ಸೇರೆ​‍್ಡ ಮತ್ತು ಒಂದೇ ಕಡೆ ಸ್ಥಿರತೆ - ನಿರ್ಗಮನ ಕುರಿತು ಮತ ಪರಿಷ್ಕರಣೆ ಆಯೋಜಿಸಿದೆ. ಪ್ರತಿಯೊಬ್ಬ ಮತದಾರರು ಕಾರ್ಯಕರ್ತರು ನೀಡುವ ಮಾಹಿತಿ ಜೊತೆಗೆ, ತಮ್ಮ ಸ್ವಂತ ವಿವೇಚನೆಯಿಂದ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.  ವೇದಿಕೆಯಲ್ಲಿ, ಪಕ್ಷದ ಮುಖಂಡರಾದ, ಕೆ.ಎಸ್‌. ಸಿದ್ದಬಸಪ್ಪ, ನಿಂಗಪ್ಪ ಸತ್ಯಪ್ಪನವರ, ಲಿಂಗರಾಜ ಹೊನ್ನಾಳಿ, ಲಕ್ಷ್ಮಿ ಕದರಮಂಡಲಗಿ, ರಾಧಾ ಅಂಗಡಿ, ರಮೇಶ ಮಾಕನೂರು, ಸಿದ್ದಪ್ಪ ಗುಡಿಹಿಂದ್ಲರ, ಮೌನೇಶ್ ಬಡಿಗೇರ, ಮೃತ್ಯುಂಜಯ ಕೊಪ್ಪದ, ಮಲ್ಲಿಕಾರ್ಜುನ ಹಲಗೇರಿ, ಸಣ್ಣತಮ್ಮಪ್ಪ ಮುದುಕಣ್ಣನವರ, ಸೇರಿದಂತೆ ಮತ್ತಿತರ ಗಣ್ಯರು, ಮಹಿಳೆಯರು ಯುವಕರು, ಮುಖಂಡರು, ಉಪಸ್ಥಿತರಿದ್ದರು. 


ಸುದ್ದಿ ಓದಿ