ಬಸವಮೂರ್ತಿ ಭಗ್ನಗೊಳಿ ಸಿದ ದುಷ್ಕಮರ್ಿಗಳ ವಿರುದ್ಧ ಕ್ರಮ : ಶಾಸಕ ಯಾದವಾಡ
ರಾಮದುರ್ಗ 29: ಪಟ್ಟಣದ ನೇಕಾರ ಪೇಟೆಯ ರುದ್ರ ಭೂಮಿಯಲ್ಲಿ ಪ್ರತಿಷ್ಠಾಪಿಸಿದ ಬಸವಮೂತರ್ಿಯನ್ನು ವಿಘ್ನಗೊಳಿಸಿದ್ದಕ್ಕಾಗಿ ನೇಕಾರ ಪೇಟೆಯ ಮುಖಂಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ರಾಮದುರ್ಗ ತಾಲೂಕ ಸದಾ ಶಾಂತಿಪ್ರಿಯ ಜಾತ್ಯಾತೀತ ನೆಲೆಗಟ್ಟಿನಲ್ಲಿ ಜೀವನವನ್ನು ನಡೆಸಿರತಕ್ಕಂಥ ನಮ್ಮ ಜನತೆ ಸದಾ ಅನೋನ್ಯವಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ ಆದರೆ ಕೆಲವು ದುಷ್ಕಮರ್ಿಗಳು ನಡೆಸಿದ ಇಂತಹ ಘಟನೆಯಿಂದ ಸಮಾಜದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುವುದರಿಂದ ದುಷ್ಕಮರ್ಿಗಳು ಎಷ್ಟೆ ಪ್ರಭಾವ ಶಾಲಿಗಳಾಗಿದ್ದರೂ ಸಮಾಜ ಘಾತುಕ ಕೃತ್ಯವನ್ನು ನಡೆಸಿರುವುದರಿಂದ ಶೀಘ್ರದಲ್ಲಿಯೇ ಬಂಧಿಸಬೇಕೆಂದು ಸ್ಥಳದಲ್ಲಿಯೇ ಹಾಜರಿದ್ದ ಪೋಲಿಸ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಭಗ್ನಗೊಂಡ ಬಸವ ಮೂತರ್ಿಯನ್ನು ನನ್ನ ಸ್ವಂತ ಖಚರ್ಿನಲ್ಲಿಯೇ ಇದ್ದ ಸ್ಥಳದಲ್ಲಿಯೇ ಸ್ಥಾಪಿಸುತ್ತೇನೆಂದು ಭರವಸೆ ನೀಡಿದ ಅವರು ಸಮಾಜದ ಬಾಂದವರು ಇಂತಹ ಘಟನೆ ಬಗ್ಗೆ ಸಮಾಜದಲ್ಲಿ ಗೊಂದಲ ಸೃಷ್ಟಿಸದೇ ಶಾಂತತೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಸಮಾಜದ ಮುಖಂಡರಾದ ಶಂಕರ ಮುರಡಿ, ಲೋಕನಾಥ ಕೊಣ್ಣೂರ, ವಿಠ್ಠಲ ಮುರಡಿ, ಸಿದ್ದಣ್ಣ ಸುಳೀಭಾವಿ ಸಿಪಿಐ ಶಶಿಕಾಂತ ವಮರ್ಾ ಹಾಗೂ ಇತರರು ಉಪಸ್ಥಿತರಿದ್ದರು.