ರಾಮದುರ್ಗ

ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು: ಜಗದೀಶ ಶೆಟ್ಟರ

ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು: ಜಗದೀಶ ಶೆಟ್ಟರ

ರಾಮದುರ್ಗ,22: ವೀರಶೈವ ಲಿಂಗಾಯತ ಒಳಪಂಗಡಗಳು ಸಮಾಜದ ಪ್ರತಿಭಾವಂತರಿಗೆ ಹಾಗೂ ಸಾಧಕರಿಗೆ ಪ್ರೋತ್ಸಾಹಿಸಲು ಪ್ರೇರಣೆ ನೀಡಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಹೇಳಿದರು.  

ಕರ್ನಾಟಕ ಬಣಜಗ ಕ್ಷೇಮಾಭಿವೃದ್ದಿ ಸಂಘ ಏರಿ​‍್ಡಸಿದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉಧ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಸೌಲಭ್ಯಕ್ಕಾದರೂ ಲಿಂಗಾಯತ ಸಮಾಜವನ್ನು ಒಟ್ಟಾಗಿಸುವ ಕಾರ್ಯ ಮಾಡಬೇಕು ಎಂದರು.  ರಾಜ್ಯದಲ್ಲಿ ಬಣಜಗ ಸಮಾಜದ ಎಲ್ಲ ತಾಲೂಕ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. 

ರಾಜ್ಯದ ಘಟಕದ ಸಂಘಟನೆ ಕೆಲವು ಬಿನ್ನಾಭಿಪ್ರಾಯಗಳಿದ್ದು ಶೀಘ್ರದಲ್ಲಿಯೆ ಶಮನಗೊಳಿಸಿ ಮತ್ತೆ ಸಂಘಟನೆ ಬಲಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಬೆಳಗಾವಿ ಜನ ಹುಬ್ಬಳ್ಳಿಯಿಂದಾ ಬಂದ ನನಗೆ ಆಶಿರ್ವಾದ ಮಾಡಿದ್ದಕ್ಕೆ ಋಣಿಯಾಗಿದ್ದೆನೆ ಎಂದು ಹೇಳಿದ ಅವರು ದಿ. ಸುರೇಶ ಅಂಗಡಿ ಕಾರ್ಯಗಳನ್ನು ಪೂರ್ಣಗೊಳಿಸಿ  ಧಾರವಾಡ ಬೆಳಗಾವಿ ರೈಲು ಸಂಪರ್ಕ ಕೆಸಲ ಮತ್ತು ಸವದತ್ತಿ ರಾಮದುರ್ಗಕ್ಕೆ ರೈಲು ಸಂಪರ್ಕ ಕಲ್ಪಿಸಲು ಕೇಂದ್ರ ರೆಲ್ವೆ ಸಚಿವರಿಗೆ ಮನವಿ ಮಾಡಿದ್ದೆನೆ ಎಂದು ತಿಳಿದರು.  

ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡ ಲಿಂಗಾಯತ ಒಳಪಂಗಡಗಳು ಕೇವಲ ಸಮಾವೇಶ ಸಭೆಗಳಿಗೆ ಮಾತ್ರ ಸೀಮತಿ ವಾಗದೇ ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಗುರುತಿಸಿ ಮುಖ್ಯವಾಹಿನಿ ತರಲು ಶ್ರಮಿಸಬೇಕು. ತಾಳಿಕೋಟಿ ಪ್ರೌಢಶಾಲಾ ಶಿಕ್ಷಕ ಅಶೋಕ ಹಂಚಳಿ ಉಪಸ್ಯಾಸ ನೀಡಿದರು.   

ತಾಲೂಕ ಘಟಕದ ಅಧ್ಯಕ್ಷ ಗುರುಸಿದ್ದಪ್ಪ ಮುತ್ತೂರ ಅಧ್ಯಕ್ಷತೆ ವಹಿಸಿದ್ದರು.  ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಪುಠಾಣಿ ಯುವ ಘಟಕದ ಅಧ್ಯಕ್ಷ ರಾಜು ಬೆಂಬಳಗಿ,  ಹರ್ಷಇತಾ ಸವಣೂರ ಇದ್ದರು. ಈರಣ್ಣಾ ಬುಡ್ಡಾಗೋಳ ಸ್ವಾಗತಿಸಿದರು.  ದಿವ್ಯಾ ಬಟಕುರ್ಕಿ ನಿರೂಪಿಸಿದರ, ಸಿದ್ದು ಹದ್ಲಿ ವಂದಿಸಿದರು. 


ಸುದ್ದಿ ಓದಿ