ಮಹಲಿಂಗಪುರ

ತ್ರಿವಿಧ ದಾಸೋಹಿ ಶಿವಕುಮಾರಶ್ರೀಗಳ ಸಾಧನೆಯು ಅನನ್ಯ: ಎಸ್‌.ಕೆ.ಗಿಂಡೆ

ತ್ರಿವಿಧ ದಾಸೋಹಿ ಶಿವಕುಮಾರಶ್ರೀಗಳ ಸಾಧನೆಯು ಅನನ್ಯ: ಎಸ್‌.ಕೆ.ಗಿಂಡೆ

ಮಹಾಲಿಂಗಪುರ: ಅನ್ನ, ಆಶ್ರಯ, ಅಕ್ಷರ ಎಂಬ ತ್ರಿವಿಧ ದಾಸೋಹಿಗಳಾಗಿದ್ದ ಸಿದ್ದಗಂಗೆಯ ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಜಿಯವರ ಶೈಕ್ಷನೀಕ, ಧಾರ್ಮಿಕ, ಅಧ್ಯಾತ್ಮೀಕ ಸಾಧನೆಯು ಅನನ್ಯವಾಗಿದೆ ಎಂದು ಬಸವಾನಂದ ಪ್ರೌಢಶಾಲೆಯ ಮುಖ್ಯಗುರು ಎಸ್‌.ಕೆ.ಗಿಂಡೆ ಹೇಳಿದರು. 

ಶನಿವಾರ ಬಸವಾನಂದ ಪ್ರೌಢಶಾಲೆಯಲ್ಲಿ ಜರುಗಿದ ಸಿದ್ದಗಂಗಾ ಶ್ರೀಗಳ 116ನೇ ಜನ್ಮದಿನಾಚರಣೆ ಹಾಗೂ 9ನೇ ತರಗತಿ ಮುಗಿಸಿ 10ನೇ ತರಗತಿಗೆ ಕಾಲಿಡುತ್ತಿರುವ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಸಿದ್ದಗಂಗಾ ಬೆಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 10ನೇ ತರಗತಿಯು ಮಕ್ಕಳ ಶೈಕ್ಷನೀಕ ಜೀವನದ ಪ್ರಮುಖ ಹಂತವಾಗಿದ್ದು. ಈ ಸಮಯದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು. ನಿರಂತರ ಓದು, ಬರವಣಿಗೆಯ ಮೂಲಕ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಮೂಲಕ ಹೆತ್ತವರು, ಕಲಿಸಿದ ಗುರುಗಳಿಗೆ, ಶಾಲೆ ಮತ್ತು ಊರಿಗೆ ಕೀರ್ತಿ ತರುವಂತಹ ಮಾದರಿ ಮಕ್ಕಳಾಗಬೇಕೆಂದು ಕರೆ ನೀಡಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಚಂದ್ರಶೇಖರ ಮೋರೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಅಧ್ಯಾತ್ಮ ಮತ್ತು ಧಾರ್ಮಿಕ ಹಿನ್ನಲೆಯುಳ್ಳ ಬಸವಾನಂದ ಶಾಲೆಯು ಪಟ್ಟಣದ ಮಾದರಿ ಶಾಲೆಗಳಲ್ಲಿ ಒಂದಾಗಿದ್ದು. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೇ ಪುಣ್ಯವಂತರು. 10ನೇ ತರಗತಿಗೆ ಕಾಲಿಡುತ್ತಿರುವ ಮಕ್ಕಳು ಇಂದಿನಿಂದ ಒಂದು ವರ್ಷಗಳ ಕಾಲ ಟಿವ್ಹಿ ಮತ್ತು ಮೋಬೈಲನಿಂದ ದೂರವಿದ್ದು ಅಭ್ಯಾಸದತ್ತ ಆಸಕ್ತಿವಹಿಸಿ ಶಿಕ್ಷಣ ಕಲಿತರೇ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುವದರ ಜೊತೆಗೆ ಭವಿಷ್ಯದ ಉನ್ನತ ಶಿಕ್ಷಣದ ಕಲಿಕೆಗೂ ಅನುಕೂಲವಾಗುತ್ತದೆ ಎಂದರು. 

ಅಧ್ಯಕ್ಷತೆವಹಿಸಿದ್ದ ಡಾ. ಬಿ.ಡಿ.ಸೋರಗಾಂವಿ ಮಾತನಾಡಿ 10ನೇ ತರಗತಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡು, ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆಯಲು ಶ್ರಮಿಸಿರಿ. ವಿದ್ಯೆಗೆ ವಿನಯವೇ ಭೂಷಣವಾಗಿರುವದರಿಂದ ತಂದೆ,ತಾಯಿ, ಗುರುಗಳಿಗೆ ವಿಧೇಯರಾಗಿದ್ದು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಪಡೆದುಕೊಂಡು ವಿದ್ಯಾರ್ಥಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಿರಿ ಎಂದರು. 

ಸಿದ್ದಗಂಗಾ ಮಠದ ಲಿಂಗೈಕ್ಯ ಪೂಜ್ಯಶ್ರೀ ಡಾಽಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಪುಷ್ಪನಮನದ ಮೂಲಕ ಪೂಜ್ಯರ 116ನೇ ಜನ್ಮದಿನೋತ್ಸವ ಆಚರಿಸಲಾಯಿತು. ರಾಧಾಕೃಷ್ಣ ಶಾಲೆಯ ಶಶಿಧರ ಉಳ್ಳೇಗಡ್ಡಿ, ಪ್ರಗತಿ ಶಾಲೆಯ ಎಂ.ಎಸ್‌.ಮಠ, ಶಿಕ್ಷಕ ಸಿದ್ದಾರೂಢ ಮೂಗಳಖೋಡ ಮಾತನಾಡಿದರು. 

ಇದೇ ಸಂದರ್ಭದಲ್ಲಿ ಕಳೆದ ಮಾ. 13ರಂದು 2019ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಸನ್ಮಾನಿಸಿ-ಗೌರವಿಸಲಾಯಿತು. 

ಬಸವಾನಂದ ಟ್ರಸ್ಟ್‌ ಕಮಿಟಿಯ ಸದಸ್ಯ ಕಲ್ಲಪ್ಪ ಚಿಂಚಲಿ, ದಾನಿಗಳಾದ ಮಹಾದೇವ ಹುಣಶ್ಯಾಳ, ಶ್ಯಾಮ್ ನದಾಫ್, ಶಿಕ್ಷಕರಾದ ಹುಮಾಯೂನ ಸುತಾರ, ಶ್ರೀನಿವಾಸ ಕಾಂಬಳೇಕರ, ಸಿ.ವ್ಹಿ.ಹುಣಶ್ಯಾಳ, ಸಿ.ಕೆ.ಮುರಗೋಡ, ಸಿ.ಎ.ಫಡತಾರೆ, ವ್ಹಿ.ಎ.ಕಾಗಿ, ಎಂ.ಪಿ.ಕಾಗಿ, ಆರ್‌.ಎ.ನಡುವಿನಮನಿ ಸೇರಿದಂತೆ ಹಲವರು ಇದ್ದರು.  

ಪೋಟೋ: 1-ಎಂಎಲ್‌ಪಿ-1 

ಮಹಾಲಿಂಗಪುರ: ಬಸವಾನಂದ ಶಾಲೆಯಲ್ಲಿ ಸಿದ್ದಗಂಗೆ ಬೇಸಿಗೆ ಶಿಬಿರದ ಶಿಕ್ಷಕರ ಬಳಗದಿಂದ ಲಿಂಗೈಕ್ಯ ಡಾಽಶಿವಕುಮಾರ ಸ್ವಾಮಿಗಳ 116ನೇ ಜನ್ಮದಿನಾಚರಣೆ ಆಚರಿಸಲಾಯಿತು. 

ಪೋಟೋ: 1-ಎಂಎಲ್‌ಪಿ-1ಎ. 

ಮಹಾಲಿಂಗಪುರ: ಸಿದ್ದಗಂಗೆ ಬೇಸಿಗೆ ಶಿಬಿರದ ಶಿಕ್ಷಕರ ಬಳಗದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಂದ್ರಶೇಖರ ಮೋರೆ ಅವರನ್ನು ಸನ್ಮಾನಿಸಿ-ಗೌರವಿಸಲಾಯಿತು. 


ಸುದ್ದಿ ಓದಿ