ಸಿರುಗುಪ್ಪ

ಆಕಸ್ಮಿಕ ಬೆಂಕಿ ಐದು ಭತ್ತದ ಹುಲ್ಲಿನ ಬಣವೆ ಭಸ್ಮ

ಆಕಸ್ಮಿಕ ಬೆಂಕಿ ಐದು ಭತ್ತದ ಹುಲ್ಲಿನ ಬಣವೆ ಭಸ್ಮ

ಲೋಕದರ್ಶನ ವರದಿ

ಸಿರುಗುಪ್ಪ 05: ನಗರದ ಬೈಪಾಸ್ ರಸ್ತೆಯ ಬಳಿ 30 ಮತ್ತು 31ನೇ ವಾರ್ಡ್ನಲ್ಲಿ ಐದು ಭತ್ತದ ಹುಲ್ಲಿನ ಬಣಿವೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಸ್ಮವಾಗಿದೆ ಅಪಾರ ನಷ್ಟವಾಗಿದೆ ಬುಜಪ್ಪ, ವೆಂಕಟೇಶ, ಅಂದನಪ್ಪ, ಶೇಖಣ್ಣ, ಮಹಾಕಾಂಳಿ, ಹಚ್ಚೋಳ್ಳಿ ರಾಮಪ್ಪ  ಎಂಬವರ 5  ಭತ್ತದ ಒಣ ಹುಲ್ಲಿನ ಬಣವೆಗಳು ಆಕಸ್ಮಿಕ ಬೆಂಕಿಯಿಂದ ಭಸ್ಮವಾದವು.

 ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಎರಡು ಅಗ್ನಿಶಾಮಕ ವಾಹನಗಳಿಂದ ನಂದಿಸಲು ಪ್ರಯತ್ನಿಸಿದರು ಬಿರು ಬಿಸಿಲಿನಿಂದಾಗಿ ಭತ್ತದ ಹುಲ್ಲಿನ ಐದು ಬಣವೆಗಳು ಸಂಪೂರ್ಣವಾಗಿ ಭಸ್ಮವಾದವು. ಸ್ಥಳಕ್ಕೆ ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿ ಪರಮೇಶಪ್ಪ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಅಗ್ನಿ ಶಾಮಕ ಠಾಣಾಧಿಕಾರಿ ಆರ್ಯಲ್ ಪೂಜಾರಿ , ಚಾಲಕರಾದ ವೀರೇಶ, ಮಂಜು, ನಾಗರಾಜ, ಸಿಬ್ಬಂದಿಗಳಾದ ಬಿ ಅಂಬಳ, ಮುರಳಿ, ಲಿಂಗರಾಜ್, ಅಮರಯ್ಯ, ಶರಣಬಸವ  ಮತ್ತಿತರರು ಇದ್ದರು 

ಸುದ್ದಿ ಓದಿ