ಅಪಘಾತ: ಅಧ್ಯಕ್ಷ ಸಾವು, ಅಧಿಕಾರಿಗಳಿಗೆ ಗಾಯ.
ಮಹಾಲಿಂಗಪುರ09: ಜಮಖಂಡಿ, ಮುಧೋಳ ವಿಭಾಗದ ಕೆಪಿಟಿಸಿಎಲ್ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆಯ ಕೇಂದ್ರ ಕಾರ್ಯಕಾರಿ ಸಮಿತಿ, ಬೆಂಗಳೂರು ಇದರ ಸದಸ್ಯರಾಗಿದ್ದ ಸಮೀಪದ ಹಳಂಗಳಿ ಗ್ರಾಮದ ನಿವಾಸಿ ಶೇಖರ ಮಚ್ಚೇಂದ್ರ ನಡುವಿನಕೇರಿ (41) ಇವರು ಏ.8 ರಾತ್ರಿ ತುಮಕೂರಿನ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡು, ಏ.9 ರ ಬೆಳಗ್ಗೆ 4.30 ಕ್ಕೆ ಮರಣ ಹೊಂದಿದ್ದಾರೆ. ಇವರ ಸಹ ಪ್ರಯಾಣಿಕ ಹೆಸ್ಕಾಂನ ಮಹಾಲಿಂಗಪುರ ಶಾಖಾಧಿಕಾರಿ ರಾಜಕುಮಾರ ಸರಿಕಾರ, ಕಿರಿಯ ಅಭಿಯಂತರ ರಮೇಶ ಚಲವಾದಿ ಹಾಗೂ ಲೈನ್ಮನ್ ಮಹಾಂತೇಶ ಪೂಜಾರಿ ಇವರೆಲ್ಲರೂ ಗಾಯಗೊಂಡಿದ್ದು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಬೋಕಿ ಮತ್ತು ಸಿಬ್ಬಂದಿ ಶೇಖರ ನಡವಿನಕೇರಿ ಇವರ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿ, ಜ್ಯೋತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ಗಾಯಾಳುಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದರು.