ಉಪಹಾರ ಮಾಡಲು ಹೋದವ ಮಸಣಕ್ಕೆ
ರಾಮದುರ್ಗ 17: ಕುಕನೂರು ತಾಲೂಕಿನ ಭಾನಾಪುರ ವೀರಾಪುರ ನಡುವೆ ಲಾರಿ ಟ್ಯಾಕ್ಟರ್ ಅಪಘಾತ ಸಂಭವಿಸಿ ಉಪಹಾರ ಮಾಡಲು ಹೋದ ವ್ಯಕ್ತಿ ಮಸಣ ಸೇರಿದ ದುರ್ಘಟನೆ ನಡೆದಿದೆ..
ರಾಮದುರ್ಗ ತಾಲೂಕಿನ ಮರ್ಕಟ ಗ್ರಾಮದ ಮಣಿಕಂಠ ಮುದುಕಪ್ಪ ಪರಕನಹಟ್ಟಿ (42) ಮïಋತಪಟ್ಟ ವ್ಯಕ್ತಿಯಾಗಿದ್ದು, ಈತನು ಹೊಟ್ಟೆಪಾಡಿಗಾಗಿ ಡ್ರೈವರ್ ಕೆಲಸಕ್ಕೆ ಸೇರಿದ ಮಣಿಕಂಠ ಸಿಮೆಂಟ್ ತುಂಬಿದ ಬಲಕರ ಗಾಡಿ ತುಂಬಿಕೊಂಡು ಕುಕನೂರು ತಾಲೂಕಿನ ಬಿಎಸ್ಸಿಪಿಎಲ್ ಕಂಪನಿಗೆ ಸಿಮೆಂಟ್ ತುಂಬಿಕೊಂಡು ಬಂದಿದೆ, ಗಾಡಿ ಪಾಳೆ ಇರುವುದರಿಂದ ಸಿಮೆಂಟ್ ಬಲಕರ್ ಗಾಡಿ ಖಾಲಿ ಮಾಡಿಕೊಂಡು ಹೊರಟ ಲಾರಿಗೆ ಕೈಮಾಡಿ ಉಪಹಾರ ಮಾಡಲು ಬಾನಾಪುರ ಗ್ರಾಮಕ್ಕೆ ಹೋಗುವಾಗ ವೀರಾಪುರ ಕ್ರಾಸ್ ನಡುವೆ ಕಲ್ಲು ತುಂಬಿಕೊಂಡು ಹೊರಟ ಟ್ಯಾಕ್ಟರಗೆ ಓವರಟೆಕ್ ಮಾಡಲು ಹೋಗಿ ಅಪಘಾತವಾಗಿದೆ ಎನ್ನುತ್ತಾರೆ ಪೆÇಲೀಸ್ ಮೂಲಗಳು. ಕುಕನೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಡಿಯಲು ಬಂದವ ಜೀವ ಸಮೇತ ಊರಿಗೆ ಹೋಗಲು ಆ ವಿಧಿ ಮಣಿಕಂಠನ ಜೀವನದಲ್ಲಿ ಆಟವಾಡಿದ್ದು ದುರ್ದೈವದ ಸಂಗತಿ. ಮಣಿಕಂಠ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಎಂದು ತಿಳಿದುಬಂದಿದೆ.