ಅಂತರರಾಷ್ಟ್ರೀಯ

ಅಫ್ಗಾನಿಸ್ತಾನದಲ್ಲಿ ಇನ್ನೂ ಸುಮಾರು 200 ಅಮೆರಿಕನ್ನರು ಬಾಕಿ; ಬ್ಲಿಂಕನ್

ಅಫ್ಗಾನಿಸ್ತಾನದಲ್ಲಿ ಇನ್ನೂ ಸುಮಾರು 200 ಅಮೆರಿಕನ್ನರು ಬಾಕಿ; ಬ್ಲಿಂಕನ್

ವಾಷಿಂಗ್ಟನ್, ಆ 31  ಅಫ್ಗಾನಿಸ್ತಾನದಲ್ಲಿ ನಿಯೋಜಿಸಿದ್ದ ಸೇನೆಯನ್ನು ಹಿಂಪಡೆಯುವ ಕೆಲಸ ಸೋಮವಾರವೇ ಅಂತ್ಯಗೊಂಡಿದ್ದು, ಇನ್ನೂ ದೇಶ ತೊರೆಯಲು ಬಯಸುವ 100 ರಿಂದ 200 ಅಮೆರಿಕನ್ನರು ಉಳಿದಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಅಫ್ಗಾನಿಸ್ತಾನದಲ್ಲಿ ಈಗಲೂ 200ಕ್ಕಿಂತ ಕಡಿಮೆ ಆದರೆ, 100ರ ಸನಿಹದ ಸಂಖ್ಯೆ ಅಮೆರಿಕನ್ನರು ಇನ್ನೂ ಉಳಿದಿದ್ದು, ಅವರು ತೆರಳಲು ಬಯಸುತ್ತಾರೆ ಎಂದು ತಾವು ನಂಬಿದ್ದೇವೆ ಎಂದರು.
ಅಲ್ಲಿನ ಉಳಿದಿರುವ ಅಮೆರಿಕನ್ನರ ಸಂಖ್ಯೆ ಎಷ್ಟು ಎಂದು ನಿಖರವಾಗಿ ತಿಳಿಯಲು ಯತ್ನಿಸುತ್ತಿದ್ದೇವೆ. ನಂತರ ಮುಂದಿನ ಕ್ರಮ ಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿ ಓದಿ