ಅಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಆಯ್ಕೆ
ಸಿರುಗುಪ್ಪ 06: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಲ್ಪಸಂಖ್ಯಾತರ ರಾಜ್ಯ ಅಧ್ಯಕ್ಷರನ್ನಾಗಿ ದಾವಣಗೆರೆಯ ಕೆ. ಅಬ್ದುಲ್ ಜಬ್ಬಾರ್ ಸಾಬ್ ಅವರನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ನಾಯಕರು ಆಯ್ಕೆ ಮಾಡಿದ್ದಾರೆ. ಅಬ್ದುಲ್ ಜಬ್ಬಾರ್ ಸಾಬ್ ಅವರಿಗೆ ದೊರೆತಿರುವ ಗೌರವಕ್ಕೆ ಸಾಮಾಜಿಕ ಚಿಂತಕರು ಜಮೀನ್ ದಾರರು ಸೈಯದ್ ಶಾ ಮೊಹಿಯುದ್ದೀನ್ ಖಾದ್ರಿ ಸಾಹೇಬ್, ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ಕರ್ನಾಟಕ ವಕ್ಫ್ ಬೋರ್ಡ್ ಬಳ್ಳಾರಿ ಜಿಲ್ಲಾ ಮಾಜಿ ಸದಸ್ಯ ಎ. ಅಬ್ದುಲ್ ನಬಿ, ಭೂ ನ್ಯಾಯ ಮಂಡಳಿ ತಾಲ್ಲೂಕು ಮಾಜಿ ಸದಸ್ಯ ಹಂಡಿ ಹಾಜಿ ಹುಸೇನ್ ಬಾಷಾ ಹೃತ್ಪೂರ್ವಕ ಅಭಿನಂದಿಸಿ ಈದ್ ಮೀಲಾದ್ ಉನ್ ನಬಿ "ಸೋ" ಮುಬಾರಕ್ ಶುಭಾಶಯ ಕೋರಿದ್ದಾರೆ.