ಅರ್ಜೆಂಟೀನಾದಲ್ಲಿ 10 ಲಕ್ಷ ದಾಟಿದ ಕೊರೋನ ಪ್ರಕರಣಗಳು
ಲಾಪಾಜ್, ಅಕ್ಟೋಬರ್ 20 : ಅರ್ಜೆಂಟೀನಾದಲ್ಲಿ ದೃಡಪಡಿಸಿದ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 10 ಲಕ್ಷ ಮೀರಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ., ಹೊಸದಾಗಿ 12,982 ಜನರಿಗೆ ಕರೋನ ಸೋಂಕು ಪ್ರಕರಣಗಳು ಖಚಿತವಾಗಿದ್ದು ದೇಶದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದೆ. 803,965 ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ಸೋಮವಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.ಕಳೆದ 24 ಗಂಟೆಗಳಲ್ಲಿ, ಕೊರೋನ ಸೊಂಕಿಗೆ 451 ಹೊಸ ಸಾವುಗಳು ದೃಡಪಟ್ಟಿದ್ದು ಈವರೆಗೆ ಸೋಂಕಿನಿಂದ ಈವರೆಗೆ ಸೋಂಕಿಗೆ 26,716 ಜನರು ಮೃತಪಟ್ಟಿದ್ದಾರೆ.ದೃಡಪಡಿಸಿದ ಒಟ್ಟು ಪ್ರಕರಣಗಳ ಪ್ರಕಾರ ಅರ್ಜೆಂಟೀನಾ ಈಗ ಐದನೇ ಸ್ಥಾನದಲ್ಲಿದೆ. ಅಮೆರಿಕ , ಭಾರತ, ಬ್ರೆಜಿಲ್ ಮತ್ತು ರಷ್ಯಾದಲ್ಲಿ ಈಗಾಗಲೇ ನಾಲ್ಕು ಮಿಲಿಯನ್ ಕೋವಿಡ್ -19 ಪ್ರಕರಣ ದಾಖಲಾಗಿದೆ.