ಪೂರ್ವ ಅಫಘಾನಿಸ್ತಾನ : ಅವಳಿ ಸ್ಫೋಟಕ್ಕೆ 9 ನಾಗರಿಕರು ಬಲಿ
ಕಾಬೂಲ್, ಅ 24 : ಅಫಘಾನ್ ಪ್ರಾಂತ್ಯದ ಘಜ್ನಿಯಲ್ಲಿ ನಡೆದ ಅವಳಿ ಸ್ಫೋಟದ ಪರಿಣಾಮವಾಗಿ ಕನಿಷ್ಠ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದು,ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ವರದಿ ಮಾಡಿದ್ದಾರೆ.
ಘಜ್ನಿ ನಗರದ ಟೋಟಲ್-ಇ ರಾವ್ಜೈನಲ್ಲಿ ರಸ್ತೆಬದಿಯಲ್ಲಿರಿಸಿದ್ದ ಬಾಂಬ್ ಸ್ಫೋಟಗೊಂಡು, ಈ ವೇಳೆ ನಾಗರಿಕರಿದ್ದ ವ್ಯಾನ್ ಸ್ಫೋಟಕ್ಕೆ ತುತ್ತಾಗಿದೆ ಎಂದು ದೃಶ್ಯ ಮಾಧ್ಯಮವೊಂದು ಪ್ರಸಾರ ಮಾಡಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದಾಗ ಎರಡನೇ ಸ್ಫೋಟ ಸಂಭವಿಸಿದೆ.
ಸೆಪ್ಟೆಂಬರ್‌ನಲ್ಲಿ ಕತಾರ್‌ನಲ್ಲಿ ಕಾಬೂಲ್-ತಾಲಿಬಾನ್ ಮಾತುಕತೆ ಆರಂಭವಾದಾಗಿನಿಂದ ಅಫ್ಘಾನಿಸ್ತಾನವು ಹಿಂಸಾತ್ಮಕ ಘರ್ಷಣೆ ಮತ್ತು ಬಾಂಬ್ ಸ್ಫೋಟಗಳ ಏರಿಕೆಗೆ ಸಾಕ್ಷಿಯಾಗಿದೆ. , ಎರಡೂ ಕಡೆಯವರು ಸುರಕ್ಷಿತ ಮತ್ತು ದೀರ್ಘಕಾಲೀನ ಕದನ ವಿರಾಮವನ್ನು ತಲುಪುವ ಇಚ್ಛೆ ವ್ಯಕ್ತಪಡಿಸಿದ್ದರೂ ಸಹ ಸ್ಫೋಟ ಪ್ರಕರಣಗಳು, ಸಾವುನೋವು ನಿಂತಿಲ್ಲ.