ರಾಷ್ಟ್ರ ಮತ್ತು ಧರ್ಮದ ಪರವಾಗಿ ಎಬಿವಿಪಿ ಸೇವೆ ಅನನ್ಯ: ಉತ್ತಂಗಿ
ಮಹಾಲಿಂಗಪುರ 11: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಯಾಗಿದ್ದು ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆಯಾಗಿದ್ದು 30 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದು ಕಾನಿಪ ಕಾರ್ಯದರ್ಶಿ ಮತ್ತು ಸಂಸ್ಥೆಯ ಆಡಳಿತಾಧಿಕಾರಿ ನಾರನಗೌಡ ಉತ್ತಂಗಿ ಹೇಳಿದರು.
ಸ್ಥಳೀಯ ಶ್ರೀ ವೈಷ್ಣವಿ ವಿದ್ಯಾ ಸಂಸ್ಥೆಯ ಅಕ್ಷರ ವಿದ್ಯಾ ವಿಹಾರ ಮಾಡರ್ನ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಬಿವಿಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕುವ ಉದ್ದೇಶದೊಂದಿಗೆ ಸ್ಥಾಪಿಸಲ್ಪಟ್ಟ ಈ ಸಂಘಟನೆ ತುರ್ತು ಪರಿಸ್ಥಿತಿ, ಬಾಬರಿ ಮಸೀದಿ ಧ್ವಂಸ ಮುಂತಾದ ಸಂಕಷ್ಟ ಸಂದರ್ಭದಲ್ಲಿ ಧರ್ಮ ಮತ್ತು ದೇಶದ ಉಳಿವಿಗಾಗಿ ಹೋರಾಡಿದ ದೇಶದ ಅತಿ ದೊಡ್ಡ ಸಂಘಟನೆಯಾಗಿದೆ ಎಂದರು.
ಶಿಕ್ಷಕ ಮನೋಜ ಕುಲಕರ್ಣಿ ಸ್ವಾಗತಿಸಿ, ಮಾತನಾಡಿದರು. ಪ್ರಾಂಶುಪಾಲ ಶಿವಾನಂದ ಲಮಾಣಿ, ಉಪ ಪ್ರಾಂಶುಪಾಲ ರಾಮಸ್ವಾಮಿ ಕೋಲ್ಕರ, ಶಿಕ್ಷಕರಾದ ಸೋಮಲಿಂಗಯ್ಯ ಹಿರೇಮಠ, ಗೀತಾ ಹುಣಶ್ಯಾಳ, ಸುಹಾಸಿನಿ ಕದ್ದಿಮನಿ, ಸುಹಾಸಿನಿ ಬದ್ನಿಕಾಯಿ, ರಾಜೇಶ್ವರಿ ಬಾಯಪ್ಪಗೋಳ, ಸುರೇಖಾ ಎಸ್. ಕೆ. ಇತರರು ಇದ್ದರು.