ಸೊಲ್ಲಾಪುರ ಗ್ರಾಮದ ಬಾವಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ
ಬೆಳಗಾವಿ : ಅನುಮಾನಾಸ್ಪದವಾಗಿ ಮಹಿಳೆಯೋರ್ವಳ ಮೃತದೇಹವು ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಸುಧಾ (28) ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಮಹಿಳೆಯಾಗಿದ್ದು, ಸೋಲಾಪುರ ಗ್ರಾಮದಲ್ಲಿ ಬಾವಿಗೆ ಬಿದ್ದು ಮಹಿಳೆ ಅನುಮಾಸ್ಪದ ಮೃತದೇಹ ಪತ್ತೆಯಾಗಿದೆ.
ಮಕ್ಕಳು ಆಗದ ಹಿನ್ನಲೆ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಮಹಿಳೆ ಕುರಿತು ಸಂಕೇಶ್ವರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಸುಧಾ ಇವರಿಗೆ ಮದುವೆಯಾಗಿ 8 ವರ್ಷ ಕಳೆದರು ಮಕ್ಕಳು ಆಗಿರಲಿಲ್ಲ ಎನ್ನಲಾಗಿದೆ.
ಮಕ್ಕಳು ಆಗದ ಹಿನ್ನಲೆ ಮನೆಯಲ್ಲಿ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಸಂಕೇಶ್ವರ ಸಿಪಿಐ ಪ್ರಹ್ಲಾದ ಚೆನ್ನಗೇರಿ ಹಾಗೂ ಪೋಲಿಸ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.