ಇಂಡಿ

ಸೊರಗು ರೋಗ ಬಾಧಿತ ಲಿಂಬೆ ತೋಟಕ್ಕೆ ಕೃಷಿ ವಿಜ್ಞಾನಿಗಳ ಭೇಟಿ

ಸೊರಗು ರೋಗ ಬಾಧಿತ ಲಿಂಬೆ ತೋಟಕ್ಕೆ ಕೃಷಿ ವಿಜ್ಞಾನಿಗಳ ಭೇಟಿ

ಇಂಡಿ 10: ಸಿಂದಗಿ ತಾಲೂಕಿನ ಗೋಲಗೇರಿ ಸಮೀಪದ ಕರವಿನಾಳ ಗ್ರಾಮದ ಶಿವಾಸ್ತಿ ಬಿರಾದಾರ ಇವರ ಲಿಂಬೆ ಕ್ಷೇತ್ರಕ್ಕೆ ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ವಿಜ್ಞಾನಿಗಳಾದ ಡಾ. ಎಸ್. ಎಸ್. ಅಂಜುಮ್ (ಸಸ್ಯರೋಗ ಶಾಸ್ತ್ರ) ಮತ್ತು ಹೀನಾ ಎಂ. ಎಸ್., (ತೋಟಗಾರಿಕೆ) ಇವರು  ಭೇಟಿ ನೀಡಿ ತೋಟವನ್ನು ವೀಕ್ಷಣೆ ಮಾಡಿದರು. 

 ಇವರ ತೋಟದಲ್ಲಿ ಸೊರಗು ರೋಗ ಬಾಧೆ ಕಂಡುಬಂದಿರುತ್ತದೆ.  ಹಾಗೇ ಇಂಡಿ ಹಾಗೂ ಸಿಂದಗಿ ತಾಲೂಕಿನ ಅನೇಕ ಲಿಂಬೆ ಬೆಳೆಗಾರರ ತೋಟದಲ್ಲಿ ಸೊರಗು ರೋಗದ ಬಾಧೆ ಕಂಡುಬಂದಿದ್ದು. ಈ ರೀತಿ ಸಮಸ್ಯೆಯಾದಲ್ಲಿ ಇದರ ಲಕ್ಷಣಗಳು ಮತ್ತು ನಿರ್ವಹಣೆ ಕ್ರಮಗಳ ಕುರಿತು ಮಾಹಿತಿಯನ್ನು ರೈತರು ಅಳವಡಿಕೊಳ್ಳಲು ಕೃಷಿ ವಿಜ್ಞಾನ ಕೇಂದ್ರದ, ವಿಜ್ಞಾನಿಗಳು ತಿಳಿಸಿದ್ದಾರೆ. 

• ಸೊರಗು ರೋಗ ಲಕ್ಷಣಗಳು:  

ಈ ರೋಗದಿಂದ ಎಲೆಯು ಹಳದಿ ಬಣ್ಣಕ್ಕೆ ತಿರುಗುತ್ತವೆ. ರೆಂಬೆಗಳು ಒಣಗಿ ಗಿಡವೆಲ್ಲ ನಿಧಾನವಾಗಿ ಸೊರಗುತ್ತದೆ. ಸೊರಗು ರೋಗ ಜಂತು ಹುಳುಗಳೊಂದಿಗೂ (ಟೈಲೆನ್ಕುಲಸ್ ಸೆಮಿಪೆನಿಟ್ರನ್ಸ್) ಸಹಾ ಸಂಬಂಧಿಸಿದೆ. 

ಸೋಂಕಿನ ಮೂಲ: ವಿವಿಧ ಶಿಲೀಂಧ್ರಗಳು, ಜಂತು ಹುಳು (ಟೈಲೆನ್ಕುಲಸ್ ಸೆಮಿಪೆನಿಟ್ರನ್ಸ್)

• ಹತೋಟಿ ಕ್ರಮಗಳು: 

ರೋಗ ತಗುಲಿದ ಗಿಡವನ್ನು ಕಿತ್ತ್ತು ನಾಶಪಡಿಸಬೇಕು. 

ಹಳದಿ ಬಣ್ಣಕ್ಕೆ ತಿರುಗಿದ ಗಿಡಗಳನ್ನು ಗುರುತಿಸಿ ಹಾಗೂ ಒಣಗಿದ ರೆಂಬೆಗಳನ್ನು ಕತ್ತರಿಸಿ ಅಂತಹ ಗಿಡಕ್ಕೆ ಕಾಪರ್ ಆಕ್ಸಿ ಕ್ಲೋರೈಡ್ (ಬ್ಲೈಟ್ಯಾಕ್ಸ್) 3 ಗ್ರಾಂ. ಜೊತೆಗೆ ಕಾರ್ಬನ್‍ಡೈಜಿಮ್ 1 ಗ್ರಾಂ.ನ್ನು ಪ್ರತಿ ಲೀಟರ್ ನೀರಿಗೆ ಬೆರಸಿ 4-5 ಲೀಟರ್ ದ್ರಾವಣವನ್ನು ಗಿಡಕ್ಕೆ ಹಾಕಿ ಮಣ್ಣಿನಿಂದ ಮುಚ್ಚಬೇಕು. 

15-20 ದಿನಗಳ ನಂತರ, 2 ಕಿ.ಗ್ರಾಂ.  ಟ್ರೈಕೋಡರ್ಮಾ ಜೈವಿಕ ಶಿಲೀಂದ್ರ ನಾಶಕವನ್ನು  100 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಮತ್ತು 20 ಕೆ.ಜಿ. ಬೇವಿನ ಹಿಂಡಿ ಜೊತೆಗೆ ಮಿಶ್ರಣ ಮಾಡಿ ಹಾಕುವುದರಿಂದ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ಸಲಹೆಗಳನ್ನು ನೀಡಿದ್ದಾರೆ.


ಸುದ್ದಿ ಓದಿ