ಐಪಿಎಲ್ ಪಂದ್ಯಾವಳಿ ಆಯೋಜನೆಯಿಂದ ದೇಶದ ಕ್ರಿಕೆಟ್ ವಿಶ್ವದಲ್ಲಿ ವಿಶಿಷ್ಟ ಸ್ಥಾನ: ಶಾಸಕ ಸವದಿ
ಮಹಾಲಿಂಗಪುರ 27: ಐಪಿಎಲ್ ಪಂದ್ಯಾವಳಿ ಆಯೋಜನೆಯಿಂದ ದೇಶದ ಕ್ರಿಕೆಟ್ ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದ ಅಂಗಡಿಯವರ ಮೈದಾನದಲ್ಲಿ ಜರುಗಿದ 22ನೇ ಆವೃತ್ತಿ ಆಜಾದ್ ಕ್ರಿಕೆಟ್ ಲವರ್ಸ್ ಟ್ರೋಫಿ ಬಹುಮಾನ ವಿತರಣಾ ಸಮಾರಂಭದಲ್ಲಿ, ಕ್ರಿಕೆಟ್ ವಿಶ್ವದ ಸರ್ವಶ್ರೇಷ್ಠ ಆಟಗಳಲ್ಲಿ ಒಂದು, ಯುವಕರಾದಿಯಾಗಿ ಎಲ್ಲರನ್ನು ಗಮನಸೆಳೆಯುತ್ತಿರುವ ಆಟವಾಗಿದೆ ಮತ್ತು ಮಕ್ಕಳು ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನ ಹರಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಚನ್ನಮ್ಮ ಯುನಿವರ್ಸಿಟಿ ದೈಹಿಕ ನಿರ್ದೇಶಕರಾದ ಅಶೋಕ ಜಾಧವ್ ಅವರು, ಸ್ಥಳೀಯ ಪ್ರತಿಭೆಗಳಿಗೆ ಕ್ರೀಡಾ ಮೂಲಭೂತ ಸೌಲಭ್ಯ,ಗಳನ್ನು ಒದಗಿಸಿದರೆ ಅವರ ಸಾಧನೆ ಗೆಲುವಾಗಿ ಸಾಕಾರಗೊಳ್ಳುತ್ತದೆ ಎಂದರು.
ಶಿಕ್ಷಣ ಸಮೂಹಗಳ ಅಧ್ಯಕ್ಷ ಬಸವರಾಜ ಕೊಣ್ಣೂರ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅದ್ಭುತ ಪ್ರತಿಭೆಗಳಿವೆ ಅವರನ್ನು ಕಡೆಗಣಿಸದೆ ಸೂಕ್ತ ಪ್ರೋತ್ಸಾಹ ನೀಡಿ ಎಂದರು.
ಸಮೀಪದ ಬನಹಟ್ಟಿ ಸಸ್ಪೆನ್ಸ್ ತಂಡ ವಿಜಯಪುರ ತಂಡವನ್ನು ಸದೆಬಡಿದು ಮಾಜಿ ಯೋಧ ಶ್ರೀಶೈಲ್ ಬಜಂತ್ರಿ ಅವರು ನೀಡಿದ ನಗದು 50ಸಾವಿರದೊಂದಿಗೆ 22ನೆಯ ಆವೃತ್ತಿಯ ಕ್ರಿಕೆಟ್ ಲವರ್ಸ್ ಟ್ರೋಫಿಯನ್ನು ತನ್ನ ಮಡಲಿಗೆ ಹಾಕಿಕೊಂಡಿತು.
ಪ್ರಥಮ ಬ್ಯಾಟಿಂಗ್ ಮಾಡಿದ ಬನಹಟ್ಟಿ ತಂಡ 8 ಓವರ್ ಗಳಲ್ಲಿ 6 ಹುದ್ದರಿಗಳ ನಷ್ಟಕ್ಕೆ 108 ರನ್ನುಗಳನ್ನು ಗಳಿಸಿತು. ಇದಕ್ಕುತ್ತರವಾಗಿ ವಿಜಯಪುರ ತಂಡ 8 ಓವರ್ ಗಳಲ್ಲಿ 6 ಹುದ್ದರಿಗಳನ್ನು ಕಳೆದುಕೊಂಡು 90 ರನ್ನುಗಳನ್ನು ಗಳಿಸಿ 18 ರನ್ನುಗಳಿಂದ ಸೋಲು ಅನುಭವಿಸಿ ಭಾಜಪ ಜಿಲ್ಲಾ ಯುವ ಮೋರ್ಚಾ ಸಂಚಾಲಕರಾದ ವಿದ್ಯಾಧರ ಕೈ. ಸವದಿ ಅವರು ನೀಡಿದ ದ್ವಿತೀಯ ಸ್ಥಾನದ ನಗದು 25 ಸಾವಿರ ರೂಗಳಿಗೆ ತೃಪ್ತಿ ಪಟ್ಟುಕೊಂಡಿತು.
ಪಟ್ಟಣದ ಅಂಗಡಿ ಮೈದಾನದಲ್ಲಿ ಜರುಗಿದ 5 ದಿವಸಗಳ ಪಂದ್ಯಾವಳಿಯಲ್ಲಿ 32 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯುದ್ಧಕ್ಕೂ ಉತ್ತಮ ಆಟ ಪ್ರದರ್ಶಿಸಿದ ಆಜಾದ್ ಮಹಾಲಿಂಗಪುರ ಮತ್ತು ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಜಮಖಂಡಿ ತಂಡಗಳು ಉಪಾಂತ್ಯ ಹಂತದಲ್ಲಿ ಮುಗ್ಗರಿಸಿ ಪ್ರಶಸ್ತಿಯಿಂದ ವಂಚಿತಗೊಂಡು ಟ್ರೋಫಿಗಳೊಂದಿಗೆ ತಲಾ ನಗದು 5 ಸಾವಿರ ರೂಗಳನ್ನು ಪಡೆದುಕೊಂಡವು.
ಬನಹಟ್ಟಿಯ ಇರ್ಫಾನ್ ಮುಧೋಳ್, ಮಹಾಲಿಂಗಪುರದ ದಸ್ತಗಿರ ಕೆಂಗಲಗುತ್ತಿ,, ವಿಜಯಪುರದ ಗೇಲ್ ಪಂದ್ಯಾವಳಿಯಲ್ಲಿ ಇವರ ಉತ್ತಮ ಆಟಕ್ಕಾಗಿ ತಲಾ ಸೈಕಲ್ ಗಳನ್ನು ಪಡೆದರು. ಉಪಾಂತ್ಯದಲ್ಲಿ ಪಂದ್ಯ ಪುರುಷ ಅಬೂಬಕ್ಕರ್ ವಿಜಯಪುರ, ರಂಜಾನ್ ಬನಹಟ್ಟಿ, ಶಿರೂರು, ಸದ್ದಾಮ್ ಪೆಂಡಾರಿ, ರಿಯಾಜ್ ವಿಜಯಪುರ, ಪಾಷಾ ಕುಡುಚಿ , ಉತ್ತಮ ತಂಡ ಶಿರೂರು ಇವರಿಗೆ ಟೂರ್ನಿಯ ವೈಯಕ್ತಿಕ ಬಹುಮಾನಗಳಾದ ಮೊಬೈಲ್, ಸಮವಸ್ತ್ರ ಕಿಟ್ಟ್, ಬ್ಯಾಟ್, ಶೂಸ್ ಮತ್ತು ಟ್ರೋಫಿಗಳನ್ನು ಪಡೆದರು.
ವೇದಿಕೆ ಮೇಲೆ ಅಧ್ಯಕ್ಷತೆ ಶೇಖರ್ ಅಂಗಡಿ, ರಾಮಚಂದ್ರ ಭಜಂತ್ರಿ, ಸಜನಸಾಬ್ ಪೆಂಡಾರಿ, ಫಯಾಜ್ ಕಲಾದಗಿ, ರಾಹುಲ್ ಅವರಾದಿ, ವರದಿಗಾರರಾದ ನಾರಾನಗೌಡ ಉತ್ತಂಗಿ, ಹಾಶಿಮ್ ಪೆಂಡಾರಿ, ರವಿ ಜವಳಗಿ, ನಿಂಗಪ್ಪ ಬಾಳಿಕಾಯಿ, ರಾಜು ನಂದೆಪ್ಪನವರ್, ಆನಂದ ಹಟ್ಟಿ, ಇಸಾಕ್ ಐನಾಪುರ, ವಿರುಪಾಕ್ಷಿ ಬಾಟ್, ಸಿದ್ದು ಬೂಸನ್ನವರ್, ಶ್ರಮಿಕ ಪೈಗಂಬರ್ ಪೆಂಡಾರಿ, ಪಾಪಾ ನಾಲಬಂದ, ಅಪ್ಪಾಸಾಬ ನಾಗನೂರ, ಅಸ್ಲಾಂ ಜಮಾದಾರ್, ಮಹಮ್ಮದ್ ಪಾಂಡು, ರಸೂಲ್ ಸಾಂಗ್ಲಿಕರ್, ಮಲಿಕ್ ಮಹಾಲಿಂಗಪುರ, ಅಸ್ಲಂ ಕೆಂಗಲಗುತ್ತಿ, ದುದ್ದಗಿ ಸರ್, ದಸ್ತಗಿರ್ ಪೆಂಡಾರಿ, ಮುಬಾರಕ ಪೆಂಡಾರಿ, ಹಸನ ಪೆಂಡಾರಿ, ಸೋಮು ಚಮಕೇರಿ, ಮೆಹಬೂಬ.ಸ. ಪೆಂಡಾರಿ, ಕಾಜು ಪೆಂಡಾರಿ,
ಸಂಚಾಲಕರು ಮೀರಾ ತಟಗಾರ, ಶ್ರೀಕಾಂತ ಮಾಗಿ, ಪ್ರಕಾಶ್ ಕರ್ಲಟ್ಟಿ, ಹಾರೂನ್ ಬೇವೂರ, ಪೈಗಂಬರ್ ಪೆಂಡಾರಿ, ಸಿಕಂದರ್ ಸಾಂಗ್ಲಿಕರ್, ಯಾಸೀನ್ ಪೆಂಡಾರಿ ಇನ್ನು ಮುಂತಾದವರಿದ್ದರು. ಲಕ್ಷ್ಮಣ್ ಕಿಶೋರ್ ನಿರೂಪಿಸಿ, ಮಲಿಕ ಬಾರಿಗಡ್ಡಿ ವಂದಿಸಿದರು.