ದೇಶದಲ್ಲಿ 30,549 ಹೊಸ ಕೊರೋನ ಪ್ರಕರಣ, 422 ಜನರ ಸಾವು

ದೇಶದಲ್ಲಿ  30,549 ಹೊಸ ಕೊರೋನ  ಪ್ರಕರಣ, 422 ಜನರ ಸಾವು

ನವದೆಹಲಿ ,ಆ 3 ದೇಶದಲ್ಲಿ  ಕಳೆದ  24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 30,549 ಮಂದಿಗೆ  ಕೊರೊನಾ ತಗುಲಿದ್ದು ಚಿಕಿತ್ಸೆಫಲಕಾರಿಯಾಗದೆ 422 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30,549 ಮಂದಿಗೆ ಹೊಸದಾಗಿ ಕೊರೊನಾ  ಸೋಂಕು ದೃಢಪಟ್ಟಿದೆ. ಸದ್ಯ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,17,26,507 ಕ್ಕೆ ಏರಿಕೆಯಾಗಿದೆ.

ಚಿಕಿತ್ಸೆ ಫಲಕಾರಿಯಾಗದೇ  ಇದೇ  ಅವಧಿಯಲ್ಲಿ  422  ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾಸೊಂಕಿನಿಂದ ಮೃತಪಟ್ಟವರ ಸಂಖ್ಯೆ 4,25,195 ಕ್ಕೆ ಹೆಚ್ಚಳವಾಗಿದೆ.  ದೇಶದಲ್ಲಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರ  ಸಂಖ್ಯೆ 3,08,96,354 ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 4,04,958 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ಹೇಳಿದೆ.

ಸುದ್ದಿ ಓದಿ