ವಿದ್ಯಾರ್ಥಿ ದೇಶದ ಸಂಸ್ಕೃತಿ ಸಂಸ್ಕಾರವನ್ನು ಸಹ ಮೈಗೂಡಿಸಿಕೊಳ್ಳಬೇಕು: ಭಕ್ಷಿ
ಮಹಾಲಿಂಗಪುರ 23 : ನಮ್ಮ ಸಂಸ್ಥೆ ನೀಡುವ ವಿಧ್ಯಾರ್ಥಿ ಫಲಾನುಭವಿ ಸಹಕಾರವನ್ನು ಸದುಪಯೋಗ ಪಡಿಸಿಕೊಳ್ಳುವುದಲ್ಲದೆ ದೇಶದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಸಹ ಮೈಗೂಡಿಸಿಕೊಳ್ಳಬೇಕು ಇದರಿಂದ ಉತ್ತಮ ಬದುಕು ತಮ್ಮದಾಗುತ್ತದೆ ಎಂದು ಗೋದಾವರಿ ಬಯೋರಿಫೈನರಿಸ್ ವ್ಯವಸ್ಥಾಪಕ ನಿರ್ದೇಶಕರಾದ ಬಿ ಆರ್. ಭಕ್ಷಿ ಅವರು ಪ್ರತಿಭಾ ಪುರಸ್ಕಾರ ಫಲಾನುಭವಿ ವಿದ್ಯಾರ್ಥಿಗಳಿಗೆ ಹೇಳಿದರು.
ನವೆಂಬರ್ 22ರಂದು ಬುಧವಾರ ಸೈದಾಪುರ ಸಮೀರವಾಡಿ ಶಿವಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮಯ್ಯ ಗ್ರಾಮೀಣ ವಿಕಾಸ ಕೇಂದ್ರ ಹಾಗೂ ವಿದ್ಯಾ ವಿಹಾರ ಮುಂಬೈ ಆಶ್ರಯದ ಹೆಲ್ಪ್ ಏ ಚೈಲ್ಡ ಯೋಜನೆಯ ಪ್ರತಿಭಾಪುರಸ್ಕಾರ ಅಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಶಿಷ್ಯವೇತನ ಮತ್ತು ಬುಕ್ಸ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಶಿಷ್ಯವೇತನಕ್ಕಾಗಿ 2001 ರಿಂದ 2023ರವರೆಗೆ ಎಸೆಸೆಲ್ಸಿಯಿಂದ ಮುಂದಿನ ಎಲ್ಲ ವಿಭಾಗಗಳ ವಿದ್ಯಾರ್ಜನೆಗೆ 11ಸಾವಿರ ವಿಧ್ಯಾರ್ಥಿ ಫಲಾನುಭವಿಗಳಿಗೆ ಗೋದಾವರಿ ಬಯೋರಿಫೈನರಿಸ್ 7ಕೋಟಿ ಹಣ ವ್ಯಯಿಸಿದೆ. ಇದರಲ್ಲಿ ನಗದು ಹಣ, ಲ್ಯಾಪ್ ಟಾಪ್ ಮತ್ತು ಬುಕ್ಸ್ ಇನ್ನಿತರ ಪರಿಕರಗಳು ಒಳಗೊಂಡಿವೆ. ಒಟ್ಟಾರೆ ಸಂಸ್ಥೆಯ ಧ್ಯೇಯ ಸರ್ವರ ಬಾಳು ಹಸನಾಗಿ ನೆಮ್ಮದಿಯ ಬದುಕನ್ನು ಸಾಗಿಸಲಿ ಎನ್ನುವುದೆ ಆಗಿದೆ ಎಂದರು.
ಹೆಲ್ಪ್ ಏ ಚೈಲ್ಡ ಯೋಜನೆಯ ಪ್ರಮುಖರಾದ ಡಾ.ವಿಜಯಕುಮಾರ ಕಣವಿ ಮಾತನಾಡಿ, ನಮ್ಮ ಗೋದಾವರಿ ಸೋಮಯ್ಯ ಸಕ್ಕರೆ ಕಾರ್ಖಾನೆ ಪ್ರತಿ ವರ್ಷ ಸಮೀರವಾಡಿ ಸೈದಾಪುರ ಪರಿಸರದ ಎಲ್ಲ ಎಸೆಸೆಲ್ಸಿ, ಪದವಿ ಪೂರ್ವ, ಪದವಿ, ತಾಂತ್ರಿಕ ಮತ್ತು ಕಾನೂನು ವಿಧ್ಯಾರ್ಥಿಗಳಿಗೆ ಆನ್ಲೈನ್ ಅರ್ಜಿ ಆಹ್ವಾನಿಸಿ ಸ್ವತಃ ಅವರ ನಿವಾಸಗಳಿಗೆ ತೆರಳಿ ವಾಸ್ತವ ಅರಿತು ಅಗತ್ಯಕ್ಕೆ ತಕ್ಕಂತೆ ಶಿಷ್ಯ ವೇತನವನ್ನು ನೀಡಲಾಗುತ್ತಿದೆ. ಇದರಲ್ಲಿ ಅನಾಥ, ಆರ್ಥಿಕವಾಗಿ ಹಿಂದುಳಿದ ಮತ್ತು ಬೀದಿ ವ್ಯಾಪಾರಿಗಳ ಮಕ್ಕಳಿಗೆ ಮೊದಲ ಪ್ರಾಶಸ್ತ್ಯ ನೀಡುತ್ತೇವೆ. ಶಿಕ್ಷಣದ ನಂತರ ಶಿಷ್ಯವೇತನ ಪಡೆದ ವಿಧ್ಯಾರ್ಥಿಗಳ ಬದುಕಿನ ಬಗ್ಗೆ ಅವಲೋಕನ ಮಾಡಿದಾಗ 56 ಶೇಕಡಾವಾರು ವಿಧ್ಯಾರ್ಥಿಗಳು ಸರ್ಕಾರಿ, ಅರೆ ಸರ್ಕಾರಿ, ವಿದೇಶಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದರಿಂದ ನಮ್ಮ ಸಂಸ್ಥೆ ಹಮ್ಮಿಕೊಂಡಿರುವ ಹೆಲ್ಪ್ ಎ ಚೈಲ್ಡ್ ಯೋಜನೆ ಯಶಸ್ವಿಯಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿ ಸಂತೋಷದಾಯಕವಾಗಿದೆ ಎಂದರು.
ಸಾಂಕೇತಿಕವಾಗಿ ಮೆಡಿಕಲ್ ಶೃತಿ ನಿಡಗುಂದಿ, ಇಂಜೀನೀಯರ್ ವಿಧ್ಯಾರ್ಥಿ ಸಚಿನ್ ಅಂಬಿ ಇವರಿಗೆ ತಲಾ 1ಲಕ್ಷ , ಬಿಎಸ್ಸಿ ಹಾರ್ಟಿಕಲ್ಚರ್ ವಿಧ್ಯಾರ್ಥಿ ಶ್ರೀಶೈಲ ತುರಡಿ 75ಸಾವಿರ್ ಚೆಕ್ಕ್ ಗಳನ್ನು ಬಿಇ ಇ್ಘಸಿ ಅಮಿತ್ ಇಲಕಲ್ ಲ್ಯಾಪ್ ಟಾಪ್ ಪಡೆದರು. ನಂತರ ಪಿಯುಸಿ ವಿಜ್ಞಾನದ ಕೃಷ್ಣ ಕುಂಬಾರ ಹಾಗೂ ಭಾಗ್ಯಾಶ್ರೀ ಸಸಾಲಟ್ಟಿ ಟೆಕ್ಷ್ಟ ಬುಕ್ಕಗಳನ್ನು ಪಡೆದರು.
ಗಣ್ಯರು ಸಸಿಗೆ ನೀರುಣಿಸಿ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಾಪ್ಟ್ವೇರ್ ಇಂಜಿನಿಯರ್ ಗೌರಿ ಕೊಕಟನೂರ, ನಸಿಂರ್ಗ್ ರೇಣುಕಾ ಬ್ಯಾಕೋಡ, ಎಂ ಎಸ್ ಸಿ ಅಗ್ರಿ ಬಸವರಾಜ ಅರಭಾವಿ, ಎಂ ಎ ಕಾವೇರಿ ತೆಲಸಂಗ, ದೀಪ ಸುತಾರ, ಶೃತಿ ನಿಡಗುಂದಿ ಹೆಲ್ಪ್ ಎ ಚೈಲ್ಡ ಯೋಜನೆಯಿಂದಾದ ಪ್ರಯೋಜನ ವಿವರಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರು ಕೆ. ಆಯ್. ಎ. ಎ.ಆರ್ ಡಾ.ನಂದಕುಮಾರ, ಜಿ ಎಂ. ಪ್ರಕಾಶ ಬೋಂದಳೆ, ಫೈನಾನ್ಸ್ ಜಿ ಎಂ. ಮೂಹ್ಮದ್ ಚಾವೂಸ್, ಡಿ ಎಸ್ ಪಾಟೀಲ್, ಡಿಜಿಎಂ ಡಾ.ಆರ್ ಎಸ್.ಶೆಟ್ಟರ್, ಎಜಿಎಂ ರಾಮಚಂದ್ರ ಹಾಗೂ ಸಹಾಯಕರಾದ ಸಂಜು ಬ್ಯಾಳಿ, ಶ್ರೀಮತಿ ರೇಖಾ ಮಠಪತಿ ಹಾಗೂ ಕಾನಿಪ ಪತ್ರಕರ್ತರು ಭಾಗವಹಿಸಿದರು. ಬಿಬಿಎ ವಿಧ್ಯಾರ್ಥಿನಿ ಅಕ್ಷತಾ ಪ್ರಾರ್ಥಿಸಿ, ಡಾ.ವಿಜಯಕುಮಾರ ಕಣವಿ ನಿರೂಪಿಸಿ ವಂದಿಸಿದರು.
ಪ್ರಸ್ತುತ 2023ನೇ ಸಾಲಿನಲ್ಲಿ ಎಸೆಸೆಲ್ಸಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ 778 ವಿದ್ಯಾರ್ಥಿಗಳಿಗೆ 1ಲಕ್ಷ ಶಿಷ್ಯವೇತನ, ಲ್ಯಾಪ್ ಟಾಪ್, ಬುಕ್ಸ್ ಇನ್ನಿತರ ವಸ್ತುಗಳನ್ನು ನೀಡಲಾಗುತ್ತಿದೆ. ನಮ್ಮ ಕಳಕಳಿ ಇಷ್ಟೆ ತೊಂದರೆಯಲ್ಲಿರುವ ಕುಟುಂಬಗಳಿಗೆ ಸಹಕರಿಸುವುದಾಗಿದೆ.ನಮ್ಮ ಸಂಸ್ಥೆಯಿಂದ ಸಹಕಾರ ಪಡೆದ ಫಲಾನುಭವಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತೊಂದರೆಗೆ ಸಿಲುಕಿದ ಜನರಿಗೆ ನೆರವಿಗೆ ಬಂದರೆ ಸಾಕು ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ದೊರೆತಂತೆಯೇ ಸರಿ.
ನೇರವಾಗಿ ಫಲಾನುಭವಿ ವಿದ್ಯಾರ್ಥಿಗಳಿಗೆ ಶುಭ ಕೋರಿದ ಗೋದಾವರಿ ಬಯೋರಿಫೈನರಿಸ್ ಸೋಮಯ್ಯ ಸಕ್ಕರೆ ಕಾರ್ಖಾನೆಯ ಮಾಲೀಕರು ಸಮೀರಬಾಯ ಹಾಗೂ ಅಮೃತಾ ಬೆನ್ ಮುಂಬೈ.