ಗುಂಡು ತಗುಲಿ ಭಾರತೀಯ ಮೂಲದ ಮೃತ ವಿದ್ಯಾರ್ಥಿ ಸಾವು
ಅಟ್ಲಾಂಟಾ 22: ಸ್ನೇಹಿತರ ಜೊತೆ ಹುಟ್ಟುಹಬ್ಬ ಆಚರಿಸುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಭಾರತೀಯ ಮೂಲದ ಮೃತ ವಿದ್ಯಾರ್ಥಿಯನ್ನು ಆರ್ಯನ್ ರೆಡ್ಡಿ (23) ಮೃತಪಟ್ಟಿದ್ದಾನೆ.
ಅಟ್ಲಾಂಟಾದ ಜಾರ್ಜಿಯಾದಲ್ಲಿರುವ ಆರ್ಯನ್ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಅಮೆರಿಕ ಪೊಲೀಸರು ತಿಳಿಸಿದ್ದಾರೆ.
ಅಟ್ಲಾಂಟಾದ ವಿಶ್ವವಿದ್ಯಾಲಯವೊಂದರಲ್ಲಿಎಂಎಸ್ ಓದುತ್ತಿದ್ದ ಆರ್ಯನ್ ಜನ್ಮದಿನದ ಸಂಭ್ರಮಾಚರಣೆ ವೇಳೆ ನಾಡ ಪಿಸ್ತೂಲ್‌ಅನ್ನು ಸ್ವಚ್ಛ ಮಾಡುವಾಗ ಈ ಘಟನೆ ಸಂಭವಿಸಿದೆ ಎಂದು ಆರ್ಯನ್ ಗೆಳೆಯರು ತಿಳಿಸಿದ್ದಾರೆ.
ಆರ್ಯನ್ ರೆಡ್ಡಿ ಅಮೇರಿಕಾದಲ್ಲಿ ಬೇಟೆಯಾಡಲು ಪರವಾನಗಿ ಪಡೆದಿದ್ದರು.
ವಿದ್ಯಾರ್ಥಿಗಳು ಅಲ್ಲಿ ಬೇಟೆಯಾಡುವ ಬಂದೂಕು ಪರವಾನಗಿಗಳನ್ನು ಪಡೆದುಕೊಳ್ಳಬಹುದು ಎಂದು ನಮಗೆ ತಿಳಿದಿರಲಿಲ್ಲ. ಯಾವುದೇ ಪೋಷಕರು ಇಂತಹ ದುರಂತವನ್ನು ಎದುರಿಸಬಾರದು ಎಂದು ಆರ್ಯನ್‌ನ ತಂದೆ ಸುದರ್ಶನ್ ರೆಡ್ಡಿ ಹೇಳಿದ್ದಾರೆ.
ಆರ್ಯನ್ ರೆಡ್ಡಿ ತೆಲಂಗಾಣ ರಾಜ್ಯದ ಭುವನಗಿರಿ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.